ದೇಶ

ಯೆಸ್ ಬ್ಯಾಂಕ್ ಹಗರಣ: ರಾಣಾ ಕಪೂರ್, ಡಿಹೆಚ್ಎಫ್ಎಲ್, ಡುಇಟ್ ಅರ್ಬನ್ ವೆಂಚರ್ಸ್ ವಿರುದ್ಧ ಎಫ್ಐಆರ್ ದಾಖಲು

Manjula VN

ನವದೆಹಲಿ: ಯೆಸ್ ಬ್ಯಾಂಕ್ ಹಗರಣ ಪ್ರಕರಣ ಸಂಬಂಧ ಬ್ಯಾಂಕ್'ನ ಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್, ಡಿಹೆಚ್ಎಫ್ಎಲ್, ಡುಇಟ್ ಅರ್ಬನ್ ವೆಂಚರ್ಸ್ ವಿರುದ್ಧ ರಾಷ್ಟ್ರೀಯ ತನಿಖಾ ದಳ ಎಫ್ಐಆರ್ ದಾಖಲಿಸಿಕೊಂಡಿದೆ. 

ರಾಣಾ ಕಪೂರ್ ಮತ್ತು ಡಿಹೆಚ್ಎಫ್ಎಲ್, ಡುಇಟ್ ಅರ್ಬನ್ ವೆಂಚರ್ಸ್ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 

ರಾಣಾ ಕಪೂರ್, ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಡುಇಟ್ ಅರ್ಬನ್ ವೆಂಚರ್ಸ್ ಎಂಬ ಕಂಪನಿ ಸ್ಥಾಪಿಸಿದ್ದರು. ಈ ಕಂಪನಿಗೆ ಡಿಹೆಚ್ಎಫ್ಎಲ್ ರೂ.600 ಕೋಟಿ ಸಾಲ ನೀಡಿತ್ತು. ಈ ಹಣವು ಡಿಹೆಚ್ಎಫ್ಎಲ್'ಗೆ ಯೆಸ್ ಬ್ಯಾಂಕ್ ನೀಡಿದ್ದ ರೂ.3000 ಕೋಟಿ ಸಾಲಕ್ಕೆ ಪ್ರತಿಯಾಗಿ ನೀಡಿದ ಲಂಚ ಹಣ ಎಂಬ ಗುಮಾನಿ ಸಿಬಿಐನದ್ದು. ಹೀಗಾಗಿಯೇ ಎಲ್ಲರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. 

ಈ ನಡುವೆ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ರಾಣಾ ಕಪೂರ್ ಅವರ ಪುತ್ರ ರೋಶನಿ, ಭಾನುವಾರ ಮುಂಬೈನಿಂದ ಲಂಡನ್'ಗೆ ತೆರಳಲು ಯತ್ನಿಸುತ್ತಿದ್ದ ವೇಳೆ, ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಯೆಸ್ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ರಾಣಾ ಕಪೂರ್, ಅವರ ಪತ್ನಿ ಮತ್ತು ಮೂವರು ಪುತ್ರಿಯರಿಗೆ ದೇಶ ಬಿಡದಂತೆ ಸೂಚಿಸಲಾಗಿದೆ. 

SCROLL FOR NEXT