ದೇಶ

ದೆಹಲಿ ಗಲಭೆ: ಹಿಂಸೆಗೆ ಪ್ರಚೋದನೆ ಆರೋಪ, 'ಪಿಎಫ್‌ಐ ಸದಸ್ಯ'ನ ಬಂಧನ

Raghavendra Adiga

ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆ ವೇಳೆ ಅಪಪ್ರಚಾರ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಪಡೆಉತ್ತರ ಪ್ರದೇಶದ  ಮೊರಾದಾಬಾದ್‌ನ ಪಿಎಫ್‌ಐ ಸದಸ್ಯ ಡ್ಯಾನಿಶ್‌ನನ್ನು ಸೋಮವಾರ ಬಂಧಿಸಿದೆ.

"ಡ್ಯಾನಿಶ್ ಪಿಎಫ್‌ಐನ ಕೌಂಟರ್ ಇಂಟೆಲಿಜೆನ್ಸ್ ವಿಂಗ್‌ನ ಮುಖ್ಯಸ್ಥರಾಗಿದ್ದರು ಮತ್ತು ನಗರದಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ" ಎಂದು ದೆಹಲಿ ಪೋಲೀಸ್ ಮೂಲಗಳು ಹೇಳಿದೆ. ಆತನ ಬಂಧನವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಇನ್ಫಾರ್ಮೇಷನ್ ವಾರ್ ನ ಬಗೆಗೆ ಸುಳಿವುಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ಪ್ರತಿಭಟನೆಗೆ ಸಂಬಂಧಿಸಿದ ಎಫ್‌ಐಆರ್ ಅನ್ನು ಕ್ರೈಂ ಬ್ರಾಂಚ್ ದಾಖಲಿಸಿದೆ ಆದರೆ ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೊಡ್ಡ ಪಿತೂರಿ ಸಂಬಂಧಿಸಿ ಇದಾಗಲೇ ವಿಶೇಷ ಪೋಲೀಸ್ ಸೆಲ್ ತನಿಖೆ  ನಡೆಸುತ್ತಿರುವುದರಿಂದ, ಈ ವಿಷಯವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.

ಇಸ್ಲಾಮಿಕ್ ಸ್ಟೇಟ್ (ಐಎಸ್) ಖೋರಾಸನ್ ಮಾಡ್ಯೂಲ್ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಓಖ್ಲಾ ಮೂಲದ ಕಾಶ್ಮೀರಿ ದಂಪತಿಯನ್ನು ದೆಹಲಿ ಪೊಲೀಸ್ ವಿಶೇಷ ಪಡೆ ಭಾನುವಾರ ಬಂಧಿಸಿತ್ತು.

ಐಎಸ್ ಗೆ ಜಮ್ಮು ಕಾಶ್ಮೀರ ಕಣಿವೆಯಿಂದ ಕಾರ್ಯನಿರ್ವಹಿಸುತ್ತಿದ್ದರು ಆದರೆ ನಂತರ ತಮ್ಮ ನೆಲೆಯನ್ನು ದೆಹಲಿ ಪೋಸ್ಟ್ ಇಂಟರ್ನೆಟ್ ಕ್ಲ್ಯಾಂಪ್ ಶೌನ್ ಗೆ ಬದಲಿಸಿದ್ದರು.
 

SCROLL FOR NEXT