ಲಾವ್ ಅಗರ್ ವಾಲ್ 
ದೇಶ

ಯಾವಾಗಲೂ ಮಾಸ್ಕ್ ಧರಿಸುವ ಅಗತ್ಯವಿಲ್ಲ, ಆತಂಕ ಬೇಡ: ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ

ಮಾರಣಾಂತಿಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಯಾವಾಗಲೂ ಮಾಸ್ಕ್ ಧರಿಸುವ ಅಗತ್ಯವಿಲ್ಲ, ಸಮಾಜದಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾಸ್ಕ್ ಹಾಕಿಕೊಳ್ಳುವ ಅಗತ್ಯತೆ ಇಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ತಿಳಿಸಿದ್ದಾರೆ.

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಯಾವಾಗಲೂ ಮಾಸ್ಕ್ ಧರಿಸುವ ಅಗತ್ಯವಿಲ್ಲ, ಸಮಾಜದಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾಸ್ಕ್ ಹಾಕಿಕೊಳ್ಳುವ ಅಗತ್ಯತೆ ಇಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ  ಸುಮಾರು 1 ಲಕ್ಷ ತಪಾಸಣೆ ಕಿಟ್ ಗಳು ಲಭ್ಯವಿದೆ.  ಹೆಚ್ಚುವರಿ ತಪಾಸಣೆ ಕಿಟ್ ಗಳ ಖರೀದಿಗಾಗಿ ಆರ್ಡರ್ ಮಾಡಲಾಗಿದೆ. ದೇಶಾದ್ಯಂತ 52  ಕಡೆಗಳಲ್ಲಿ ಪರೀಕ್ಷಾ  ಸೌಲಭ್ಯಗಳಿದೆ. ಒಟ್ಟಾರೇ,  52 ಮಾದರಿ ಸಂಗ್ರಹ ಸೆಂಟರ್ ಗಳು ಇರುವುದಾಗಿ ತಿಳಿಸಿದರು 

ದೇಶಾದ್ಯಂತ ಕಂಡುಬಂದಿರುವ 73 ಕೊರೋನಾ ವೈರಾಣು ಪಾಸಿಟಿವ್ ಪ್ರಕರಣಗಳಲ್ಲಿ  56, ಭಾರತೀಯರು ಹಾಗೂ 17 ಮಂದಿ ವಿದೇಶಿಯರು ಆಗಿದ್ದಾರೆ. ಮಾಲ್ಡೀವ್ಸ್, ಮಯಾನ್ಮಾರ್, ಬಾಂಗ್ಲಾದೇಶ, ಚೀನಾ, ಅಮೆರಿಕಾ, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ, ಪೆರು ನಂತಹ ರಾಷ್ಟ್ರಗಳ 48 ವಿದೇಶಿ ಪ್ರಜೆಗಳು ಜೊತೆಗೆ  900 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. 

ಅದೃಷ್ಟವೆಂಬಂತೆ ಭಾರತದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳಿಲ್ಲ. ಹೊರಗಡೆಯಿಂದ ಬಂದಂತಹ ,ಕುಟುಂಬ ಸದಸ್ಯರಿಂದ ಉಂಟಾದಂತಹ ಕೆಲವೇ ಕೆಲವು  ಪ್ರಕರಣಗಳಿವೆ. ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಲಾಗುತ್ತಿದೆ.  ಒಂದು ವೇಳೆ ಹೆಚ್ಚಿನ ಉಷ್ಣಾಂಶದಿಂದ ಜೀವಕ್ಕೆ ಕಷ್ಟವಾಗಬಹುದು ಎಂದು ಸಾಮಾನ್ಯವಾಗಿ ನಿರೀಕ್ಷೆ ಹೊಂದಲಾಗಿದೆ. ಆದರೆ,  ಇದು ದೃಢಪಟ್ಟಿಲ್ಲ ಎಂದರು.

ಅನಿವಾಸಿ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ. ಇದು ನಾಳೆಯಿಂದ ಏಪ್ರಿಲ್ 15ರವೆರಗೂ ಜಾರಿಯಲ್ಲಿ ಇರಲಿದೆ ಎಂದು ಲಾವ್ ಅಗರ್ ವಾಲ್ ತಿಳಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಳೆ ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ; ಈ ಬಗ್ಗೆ ಸ್ವತಃ ಸಿಎಂ ಹೇಳಿದ್ದೇನು?

ಬೀದರ್: ಅರಣ್ಯ ಭೂಮಿ ಒತ್ತುವರಿ ಆರೋಪ; KDP ಸಭೆಯಲ್ಲಿ ಕೈ ಕೈ ಮಿಲಾಯಿಸಿದ BJP ಶಾಸಕ, Congress MLC, Video Viral!

ಒಮನ್‌ನಲ್ಲಿ ಟ್ರೆಕ್ಕಿಂಗ್ ದುರಂತ: ಮಲಯಾಳಂ ಹಿನ್ನೆಲೆ ಗಾಯಕಿ 'ಚಿತ್ರಾ ಅಯ್ಯರ್' ಸಹೋದರಿ ಸಾವು!

ನನಗಿರುವ ಮಾಹಿತಿ ಪ್ರಕಾರ ನಾಯಕತ್ವ ಬದಲಾವಣೆ ಇಲ್ಲ: ಸಚಿವ ಕೃಷ್ಣಬೈರೇಗೌಡ ಸ್ಫೋಟಕ ಹೇಳಿಕೆ

ದೇಶದ್ರೋಹ ಆರೋಪ: ಸುಪ್ರೀಕೋರ್ಟ್ ಜಾಮೀನು ನಿರಾಕರಣೆ, ಉಮರ್ ಖಾಲಿದ್ ಮೊದಲ ಪ್ರತಿಕ್ರಿಯೆ..!

SCROLL FOR NEXT