ದೇಶ

ದಯಾಮರಣ ಕೋರಿ ನಿರ್ಭಯಾ ಅಪರಾಧಿಗಳ ಕುಟುಂಬ ಸದಸ್ಯರು ರಾಷ್ಟ್ರಪತಿಗೆ ಮನವಿ!

Srinivas Rao BV

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳ ಕುಟುಂಬ ಸದಸ್ಯರು “ದಯಾಮರಣ”ಕ್ಕೆ ಅನುಮತಿ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ದಯಾಮರಣ ಕೋರಿ ಮನವಿ ಸಲ್ಲಿಸಿರುವವರಲ್ಲಿ ನಾಲ್ವರು ತಪ್ಪಿತಸ್ಥರ  ವಯಸ್ಸಾಗಿರುವ ಪೋಷಕರು, ಒಡಹುಟ್ಟಿದವರು ಹಾಗೂ ಮಕ್ಕಳು ಸೇರಿದ್ದಾರೆ.

ನಮ್ಮ ಕೋರಿಕೆಗೆ ಸಮ್ಮತಿಸಿ ದಯಾಮರಣಕ್ಕೆ ರಾಷ್ಟ್ರಪತಿಗಳು ಹಾಗೂ ಸಂತ್ರಸ್ಥೆಯ  ಪೋಷಕರು ಅನುಮತಿ ನೀಡಬೇಕು. ನಿರ್ಭಯದಂತಹ ಅಪರಾಧ ಘಟನೆಗಳು ಭವಿಷ್ಯದಲ್ಲಿ ಸಂಭವಿಸದಂತೆ ತಡೆಯಲು ನಾವು ರಾಷ್ಟ್ರಪತಿ ಹಾಗೂ ಸಂತ್ರಸ್ತೆಯ ಪೋಷಕರನ್ನು ವಿನಂತಿಸುತ್ತೇವೆ ಇದರಿಂದ ನಿರ್ಭಯದಂತಹ ಮತ್ತೊಂದು ಘಟನೆ ಸಂಭವಿಸುವುದಿಲ್ಲ ಎಂದು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಜಗತ್ತಿನಲ್ಲಿ ಕ್ಷಮಿಸಲು ಸಾಧ್ಯವಾಗದ ಯಾವುದೇ ಪಾಪಗಳಿಲ್ಲ ಎಂದು ಕುಟುಂಬಗಳು  ಅರ್ಜಿಯಲ್ಲಿ ಹೇಳಿವೆ. ನಮ್ಮ ದೇಶದಲ್ಲಿ“ ಮಹಾಪಾಪಿ ”(ಮಹಾನ್ ಪಾಪಿಗಳು) ಸಹ ಕ್ಷಮಿಸಲ್ಪಡುತ್ತಾರೆ. ಸೇಡು ಎಂಬುದು ಅಧಿಕಾರದ ವ್ಯಾಖ್ಯಾನವಲ್ಲ. ಕ್ಷಮಿಸುವಲ್ಲಿ ಮಹಾನ್ ಶಕ್ತಿ ಅಡಗಿದೆ ಎಂದು  ಪತ್ರದಲ್ಲಿ ಕುಟುಂಬಗಳ ಸದಸ್ಯರು ಮನವಿ ಮಾಡಿದ್ದಾರೆ.
 

SCROLL FOR NEXT