ಸೀತಾರಾಂ ಯೆಚೂರಿ 
ದೇಶ

ಪ್ರಧಾನಮಂತ್ರಿ ಭಾಷಣದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಪ್ಯಾಕೇಜ್‌ ಇಲ್ಲ: ಸೀತಾರಾಂ ಯೆಚೂರಿ ಕಿಡಿ

ಇಡೀ ದೇಶವೇ ಮಾರಕ ಕೊರೋನಾ ವೈರಸ್ ನಿಂದಾಗಿ ಬಳಲುತ್ತಿದ್ದು, ಇಂತಹ ಸಂದರ್ಭದಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ವೈರಸ್ ನಿಯಂತ್ರಣಕ್ಕೆ ಯಾವುದೇ ಪ್ಯಾಕೇಜ್‌ ಘೋಷಣೆ ಮಾಡಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕಿಡಿಕಾರಿದ್ದಾರೆ.

ನವದೆಹಲಿ: ಇಡೀ ದೇಶವೇ ಮಾರಕ ಕೊರೋನಾ ವೈರಸ್ ನಿಂದಾಗಿ ಬಳಲುತ್ತಿದ್ದು, ಇಂತಹ ಸಂದರ್ಭದಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ವೈರಸ್ ನಿಯಂತ್ರಣಕ್ಕೆ ಯಾವುದೇ ಪ್ಯಾಕೇಜ್‌ ಘೋಷಣೆ ಮಾಡಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಭಾಷಣದ ಕುರಿತು ಪ್ರತಿಕ್ರಿಯೆ ನೀಡಿರುವ ಯೆಚೂರಿ ಅವರು, 'ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಕೊರೋನಾ ಸೋಂಕು ಬಗ್ಗೆ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೊರೊನಾವೈರಸ್ ಮಹಾಮಾರಿಯನ್ನು ಎದುರಿಸಲು ಜನರಿಗೆ ನೆರವಾಗಲು ಸರ್ಕಾರದ ಸಿದ್ಧತೆಗಳು ಮತ್ತು ಅದು ಕೈಗೊಂಡಿರುವ ಕ್ರಮಗಳ ಬಗ್ಗೆ ಏನೂ ಇರಲಿಲ್ಲ ಎಂಬುದು ದುರದೃಷ್ಟಕರ. ಪ್ರಧಾನ ಮಂತ್ರಿಗಳು ಮುಂದಿಟ್ಟ ಸಾಂಕೇತಿಕ ಕ್ರಮಗಳನ್ನು ಬಿಟ್ಟರೆ, ವರ್ಕ್ ಫ್ರಮ್ ಹೋಮ್(ಮನೆಯಿಂದ ಕೆಲಸ) ಅವಕಾಶವಿರದ, ತಮ್ಮ ದಿನದ ಆದಾಯದಿಂದಲೇ ಬದುಕುಳಿಯಬೇಕಾಗಿರುವ ಭಾರತದ ಬಹುಪಾಲು ಜನಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಶಮನ ಮಾಡಲು ಸರಕಾರ ಏನು ಮಾಡುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಅಂತೆಯೇ ಎಲ್ಲಾ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಳ್ಳುವುದರಿಂದ ಅತಿ ಹೆಚ್ಚು ಸಂಕಷ್ಟಕ್ಕೀಡಾಗುವವರು ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರು ಎಂಬುದು ಸ್ಪಷ್ಟ. ಸರಕಾರ ತನ್ನ ದಾಸ್ತಾನುಗಳಲ್ಲಿರುವ ಹೆಚ್ಚುವರಿ ಆಹಾರಧಾನ್ಯಗಳನ್ನು ಇವರಿಗೆ ಲಭ್ಯಗೊಳಿಸಲು ಏನು ಮಾಡುತ್ತಿದೆ? ಕೇರಳದ ಎಡ ಸರಕಾರ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದೆ.

ಮಾತ್ರವಲ್ಲ, ಈಗ ಬಡವರ ಸಂಕಷ್ಟಗಳನ್ನು ಶಮನ ಮಾಡಲು ಕೂಡ ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಅದು ಮಾರ್ಚ್ 19ರಂದು 20,000 ಕೋಟಿ ರೂ.ಗಳ ಪುನರುಜ್ಜೀವನ ಪ್ಯಾಕೇಜನ್ನು ಪ್ರಕಟಿಸಿದೆ. ಪಿಂಚಣಿದಾರರು, ಆಟೋ ಮತ್ತು ಬಸ್ ಮಾಲಕರಿಗೂ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಪ್ರಧಾನ ಮಂತ್ರಿಗಳು ಈ ಮಾದರಿಯನ್ನು ಅನುಸರಿಸಿ ಇಡೀ ದೇಶಕ್ಕೆ ಇಂತಹ ಕ್ರಮಗಳನ್ನೇಕೆ ಪ್ರಕಟಿಸಲಿಲ್ಲ ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT