ದೇಶ

ದೇಶಾದ್ಯಂತ ಜನತಾ ಕರ್ಫ್ಯೂ: ಬಹುತೇಕ ರೈಲು, ವಿಮಾನ ಸೇವೆ ಸ್ಥಗಿತ

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾರ್ವಜನಿಕರಿಗೆ ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದು, ಪರಿಣಾಮ ರೈಲ್ವೆ ಇಲಾಖೆ ದೇಶಾದ್ಯಾಂತ 3 ಸಾವಿರ 700 ರೈಲುಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. 

ಮತ್ತೊಂದೆಡೆ, ಖಾಸಗಿ ವಲಯದ ವಿಮಾನಯಾನ ಸಂಸ್ಥೆ ಗೋ ಏರ್ ಮತ್ತು ಇಂಡಿಗೊ ಸಹ ಭಾನುವಾರ ತಮ್ಮ ಎಲ್ಲಾ ವಿಮಾನಯಾನಗಳನ್ನು ರದ್ದುಗೊಳಿಸಿವೆ.

ರೈಲ್ವೆ ಆದೇಶದ ಪ್ರಕಾರ, 'ದೇಶದ ಯಾವುದೇ ರೈಲ್ವೆ ನಿಲ್ದಾಣದಿಂದ ಶನಿವಾರ ಮಧ್ಯರಾತ್ರಿಯವರೆಗೆ ಭಾನುವಾರ ರಾತ್ರಿ 10 ಗಂಟೆಗೆ ಯಾವುದೇ ಪ್ರಯಾಣಿಕ ಅಥವಾ ಎಕ್ಸ್ಪ್ರೆಸ್ ರೈಲು ಓಡುವುದಿಲ್ಲ ಎಂದು ಶುಕ್ರವಾರವೇ ಆದೇಶ ಹೊರಡಿಸಲಾಗಿದೆ.

ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಮತ್ತು ಸಿಕಂದರಾಬಾದ್ ನಲ್ಲಿ ಉಪನಗರ ರೈಲು ಸೇವೆಗಳನ್ನೂ ಸಹ ಕಡಿತಗೊಳಿಸಲಾಗುತ್ತಿದೆ ಅಗತ್ಯ ಪ್ರಯಾಣಕ್ಕೆ ಮಾತ್ರ ಅನುವು ಮಾಡಿಕೊಡಲು ಕೆಲವೇ ಕೆಲವು ರೈಲುಗಳನ್ನು ಮಾತ್ರ ಓಡಿಸಲಾಗುವುದು ಎಂದೂ ರೈಲ್ವೆ ಮಂಡಳಿ ಹೇಳಿದೆ. 

ಪ್ರತಿ ರೈಲ್ವೆ ವಲಯವು ಭಾನುವಾರ ಎಷ್ಟು ರೈಲುಗಳನ್ನು ಓಡಿಸಲು ಅನುಮತಿ ನೀಡಬೇಕು ಎಂಬುದನ್ನು ನಿರ್ಧರಿಸುವ ಸ್ವಯಂ ಅಧಿಕಾರ ಹೊಂದಿದೆ ಎಂದು ಹೇಳಿದ್ದಾರೆ.

SCROLL FOR NEXT