ದೇಶ

ಏಪ್ರಿಲ್ ನಿಂದ 'ಸಿಂಗಲ್ ಫಾದರ್' ಪೋಷಕರಿಗೂ ರೈಲ್ವೆ ಇಲಾಖೆಯಲ್ಲಿ ಮಕ್ಕಳ ಪೋಷಣೆಗೆ ವೇತನ ಸಹಿತ ರಜೆ

Sumana Upadhyaya

ನವದೆಹಲಿ; ಲಿಂಗ ನ್ಯಾಯ ಮತ್ತು ಸಮಾನತೆಯನ್ನು ಹೆಚ್ಚು ಪ್ರಚುರಪಡಿಸಲು ರೈಲ್ವೆ ಇಲಾಖೆ ಈ ವರ್ಷ ಏಪ್ರಿಲ್ ನಿಂದ ಸಿಂಗಲ್ ಫಾದರ್ ಗೆ ಸಹ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ರಜೆ ನೀಡುವ ಸರ್ಕಾರದ ಯೋಜನೆಯನ್ನು ಜಾರಿಗೆ ತರಲಿದೆ.


ನಿನ್ನೆ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸರ್ಕಾರದ ನೀತಿ ಪ್ರಕಾರ, ಸಿಂಗಲ್ ಫಾದರ್ ರೈಲ್ವೆ ನೌಕರರು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಎರಡು ವರ್ಷಗಳವರೆಗೆ ರಜೆ ತೆಗೆದುಕೊಳ್ಳುವ ಸೌಲಭ್ಯವಿದೆ. ಇದು ಈ ವರ್ಷ ಏಪ್ರಿಲ್ ನಿಂದ ಜಾರಿಗೆ ಬರಲಿದೆ ಎಂದರು.


ಈ ಸೌಲಭ್ಯದಡಿ ಮಗುವಿನ ಪೋಷಕರು ಒಂದು ವರ್ಷದವರೆಗೆ ಪೂರ್ಣ ವೇತನ ಮತ್ತು ಮತ್ತೊಂದು ವರ್ಷ ಶೇಕಡಾ 80ರಷ್ಟು ವೇತನ ಪಡೆಯುವ ಮೂಲಕ ರಜೆ ಪಡೆದುಕೊಳ್ಳಬಹುದು ಎಂದು ಹೇಳಿದರು.

SCROLL FOR NEXT