ಹೈದರಾಬಾದ್: ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯಿಂದ ಸ್ಥಳೀಯ ವ್ಯಕ್ತಿಯೊರ್ವನಿಗೆ ಸೋಂಕು ಹರಡಿದ್ದು ತೆಲಂಗಾಣದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.
ದುಬೈನಿಂದ ವಾಪಸ್ಸಾಗಿದ್ದ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯಿಂದ 21 ವರ್ಷದ ಯುವಕನಿಗೆ ಇದೀಗ ಸೋಂಕು ಹರಡಿದೆ.
ಇದೀಗ ರಾಜ್ಯದಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 21 ಪಾಸಿಟಿವ್ ಪ್ರಕರಣ ತೆಲಂಗಾಣದಲ್ಲಿ ಪತ್ತೆಯಾಗಿದೆ.
10 ಇಂಡೋನೇಷಿಯಾ ಮೂಲದ ವ್ಯಕ್ತಿಗಳು ಮಾರ್ಚ್ 13ರಂದು ನವದೆಹಲಿಯಿಂದ ಕರೀಂನಗರಕ್ಕೆ ಸಂಪಕ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಿಂದ ಆಗಮಿಸಿದ್ದು ಅವರು ಸೇರಿ ರಾಜ್ಯದಲ್ಲಿ 21 ಪ್ರಕರಣ ಪತ್ತೆಯಾಗಿವೆ.