ದೇಶ

ಗಾಳಿ ಮೂಲಕ ಕೋವಿಡ್ -19 ಹರಡುತ್ತಾ! ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತೆ?

Nagaraja AB

ನವದೆಹಲಿ: ಜಗತ್ತಿನಾದ್ಯಂತ ಭಯ ಭೀತಿ ಸೃಷ್ಟಿಸಿರುವ ಮಾರಕ ಕೊರೋನಾವೈರಸ್ ಗಾಳಿ ಮೂಲಕ ಹರಡುವಿಕೆ ಬಗ್ಗೆ ಈವರೆಗೂ ಯಾವುದೇ ವರದಿ ಬಂದಿಲ್ಲ, ಇದು ಹೆಚ್ಚಾಗಿ ಉಸಿರಾಟ ಹಾಗೂ ನಿಕಟ ಸಂಪರ್ಕದ ಮೂಲಕ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಡಾ.ಪೂನಂ ಖೇತರ್‌ಪಾಲ್ ಸಿಂಗ್ ತಿಳಿಸಿದ್ದಾರೆ.

ಕೊರೋನಾವೈರಾಣು ಗಾಳಿ ಮೂಲಕ ಹರಡುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಬೆನ್ನಲ್ಲೇ ಡಾ. ಪೂನಂ ಈ ರೀತಿಯ ಹೇಳಿಕೆ ನೀಡಿದ್ದಾರೆ. 

ಕೊರೋನಾವೈರಸ್ ತಗುಲಿರುವವರ ಜೊತೆಗಿನ ತಮ್ಮ ಅಭಿಪ್ರಾಯ ಹಾಗೂ ದೊರೆತ್ತಿರುವ ಮಾಹಿತಿ ಪ್ರಕಾರ, ಉಸಿರಾಟ (ಉದಾಹರಣೆಗೆ ಅನಾರೋಗ್ಯದ ವ್ಯಕ್ತಿಯು ಕೆಮ್ಮಿದಾಗ ಉತ್ಪತ್ತಿಯಾಗುವ ಎಂಜಲು )ಹಾಗೂ ನಿಕಟ ಸಂಪರ್ಕದ ಮೂಲಕ ಬರುತ್ತದೆ. ಆದ್ದರಿಂದಲೇ ಕೈ ಹಾಗೂ ಉಸಿರಾಡುವಾಗ ಶುಚಿತ್ವ ಕಾಪಾಡಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿರುವುದಾಗಿ ಡಾ. ಸಿಂಗ್  ತಿಳಿಸಿದರು.

ಆಸ್ಪತ್ರೆಗಳಲ್ಲಿ ಐಸಿಯು, ಸಿಸಿಯುನಂತಹ ಮುಚ್ಚಿದ ವಾತವಾರಣದಲ್ಲಿ  ಗಾಳಿ ಮೂಲಕ ವೈರಾಣು ಹರಡುವ ಸಾಧ್ಯತೆ ಇದೆ ಎಂದು ಚೀನಾ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ. ಈ ಬಗ್ಗೆ ಮಾದರಿಯಲ್ಲಿ ವೈರಾಣು ಹರಡುವಿಕೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT