ದೇಶ

ಕೊರೋನ ಭೀತಿ: ನಾಳೆಯಿಂದ ಮಾ.31ರವರೆಗೆ ದೇಶೀಯ ವಿಮಾನ ಸೇವೆಗಳು ಲಾಕ್ ಡೌನ್

Sumana Upadhyaya

ನವದೆಹಲಿ: ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತೊಂದು ಮಹತ್ವ ಹೆಜ್ಜೆ ಇಟ್ಟಿದ್ದು, ನಾಳೆಯಿಂದ ಎಲ್ಲಾ ದೇಶೀಯ ವಿಮಾನ ಸೇವೆ ರದ್ದುಗೊಳಿಸಲಿದೆ.

ಎಲ್ಲ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಸೇವೆಗಳು ಮಾ.24ರ ರಾತ್ರಿ 11:59ರೊಳಗಾಗಿ ತಮ್ಮ ಹಾರಾಟ ಸ್ಥಗಿತಗೊಳಿಸುವಂತೆ ಕೇಂದ್ರ ಹೇಳಿದೆ.

ಬುಧವಾರದ ನಂತರ ಕೇವಲ ಸರಕು ವಿಮಾನಗಳಿಗೆ ಮಾತ್ರ ಅವಕಾಶವಿರಲಿದೆ. ಸರಕಾರ ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನು ಒಂದು ವಾರ ನಿಷೇಧಿಸಿದೆ.

ದೇಶದಲ್ಲಿನ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ 415ಕ್ಕೆ ತಲುಪಿದ ನಂತರ ಕೇಂದ್ರ ದೇಶೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ.

ದೆಹಲಿಗೆ ಆಗಮಿಸಲು ಅಥವಾ ಅಲ್ಲಿಂದ ನಿರ್ಗಮಿಸಲು ಯಾವುದೇ ವಿಮಾನಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

ಪಶ್ಚಿಮ ಬಂಗಾಳಕ್ಕೆ ಎಲ್ಲಾ ವಿಮಾನ ಹಾರಾಟ ರದ್ದುಗೊಳಿಸುವಂತೆ ಇಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದರು.

SCROLL FOR NEXT