ಕೊರೋನಾ ವೈರಸ್: ಚೀನಾ ಮೊಬೈಲ್ ಸಂಸ್ಥೆ ಓಪ್ಪೋದಿಂದ ಪ್ರಧಾನಿ ಖಾತೆಗೆ 1 ಕೋಟಿ ರೂಪಾಯಿ ದೇಣಿಗೆ!
ಕೊರೋವಾ ವಿರುದ್ಧ ಹೋರಾಡುವುದಕ್ಕೆ ಪ್ರಧಾನಿ ಖಾತೆಗೆ ಚೀನಾ ಮೊಬೈಲ್ ಉತ್ಪಾದಕ ಸಂಸ್ಥೆ ಓಪ್ಪೋ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ನವದೆಹಲಿ: ಕೊರೋನಾ ವಿರುದ್ಧ ಹೋರಾಡುವುದಕ್ಕೆ ಪ್ರಧಾನಿ ಖಾತೆಗೆ ಚೀನಾ ಮೊಬೈಲ್ ಉತ್ಪಾದಕ ಸಂಸ್ಥೆ ಓಪ್ಪೋ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಪ್ರಧಾನಿಗಳ ರಾಷ್ಟ್ರೀಯ ಪರಿಹಾರ ನಿಧಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿಗಳನ್ನು ನೀಡಿದೆ. ಕೊರೋನಾ ವಿರುದ್ಧ ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಇದು ನಾವು ಸಲ್ಲಿಸುತ್ತಿರುವ ಸಣ್ಣ ಗೌರವ ಹಾಗೂ ಅವರ ಕ್ಷೇಮದೆಡೆಗೆ ಸಣ್ಣ ಹೆಜ್ಜೆ ಎಂದು ಸಂಸ್ಥೆ ಹೇಳಿದೆ.
ಓಪ್ಪೋ ಸಂಸ್ಥೆ ತನ್ನೆಲ್ಲಾ ಆನ್-ಗ್ರೌಂಡ್ ಕಾರ್ಯಾಚರಣೆಗಳನ್ನೂ ಲಾಕ್ ಡೌನ್ ಹಿನ್ನೆಲೆ ಸ್ಥಗಿತಗೊಳಿಸಿದ್ದು ಓಪ್ಪೋ ಇಎಂಸಿಒ ಎಂ31 ಬಿಡುಗಡೆಯನ್ನೂ ಮುಂದೂಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.