ಯೋಗಿ ಆದಿತ್ಯನಾಥ್ 
ದೇಶ

ನಮ್ಮ ದೇಶದಲ್ಲಿ ಕೊರೋನಾ ಹರಡಲು ತಬ್ಲಿಘಿಗಳೇ ಕಾರಣ:ಯೋಗಿ ಆದಿತ್ಯನಾಥ್

ಕೊರೋನಾ ವೈರಸ್ ಹರಡಲು ತಬ್ಲಿಘಿ ಜಮಾತ್ ಸದಸ್ಯರೇ ಕಾರಣ ಎಂದು ಆರೋಪಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವೈರಸ್ ಸೋಂಕಿಗೆ ಒಳಗಾಗುವುದು ಅಪರಾಧವಲ್ಲ ಆದರೆ ಅದನ್ನು ಮರೆಮಾಚುವುದು ಖಂಡಿತ ಅಪರಾಧ ಎಂದು ಹೇಳಿದ್ದಾರೆ.

ಲಕ್ನೊ: ಕೊರೋನಾ ವೈರಸ್ ಹರಡಲು ತಬ್ಲಿಘಿ ಜಮಾತ್ ಸದಸ್ಯರೇ ಕಾರಣ ಎಂದು ಆರೋಪಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸೋಂಕಿಗೆ ಒಳಗಾಗುವುದು ಅಪರಾಧವಲ್ಲ ಆದರೆ ಅದು ತಮಗೆ ಬಂದಿದೆ ಎಂದು ಮರೆಮಾಚುವುದು ಖಂಡಿತ ಅಪರಾಧ ಎಂದು ಹೇಳಿದ್ದಾರೆ.

ಕೊರೋನಾ ಹಬ್ಬಿಸಿ ಅಪರಾಧವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಎಚ್ಚರಿಕೆ ನೀಡಿದರು. ನಿನ್ನೆ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ಹಬ್ಬಿಸುವಲ್ಲಿ ತಬ್ಲಿಘಿ ಜಮಾತ್ ಪಾತ್ರ ಅತ್ಯಂತ ಖಂಡನೀಯ. ಸೋಂಕು ದೇಹಕ್ಕೆ ತಾಗಿಸಿಕೊಳ್ಳುವುದು ಅಪರಾಧವಲ್ಲ. ಆದರೆ ಈ ರೋಗವನ್ನು ಬೇರೊಬ್ಬರಿಗೆ ಹರಡುವುದು ಖಂಡಿತವಾಗಿಯೂ ತಪ್ಪು. ತಬ್ಲಿಘಿ ಜಮಾತ್ ಗೆ ಸಂಬಂಧಪಟ್ಟವರು ಈ ಬಹುದೊಡ್ಡ ಅಪರಾಧವನ್ನು ಮಾಡಿದ್ದಾರೆ ಎಂದರು.

ಉತ್ತರ ಪ್ರದೇಶ ಮತ್ತು ಬೇರೆ ಕಡೆಗಳಲ್ಲಿ ಕೊರೋನಾ ವೈರಸ್ ಹಬ್ಬಲು ತಬ್ಲಿಘಿ ಜಮಾತ್ ಕಾರಣವೆಂದು ತಿಳಿದುಬಂದಿದೆ. ತಬ್ಲಿಘಿ ಸದಸ್ಯರು ಆರಂಭದಲ್ಲಿ ಮರೆಮಾಚದೆ ವೈರಸ್ ಹಬ್ಬುವುದನ್ನು ತಡೆದಿದ್ದರೆ ಖಂಡಿತವಾಗಿಯೂ ಇಷ್ಟು ವ್ಯಾಪಕವಾಗಿ ಹರಡುತ್ತಿರಲಿಲ್ಲ ಎಂದರು.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಕಳೆದ ಮಾರ್ಚ್ ಆರಂಭದಲ್ಲಿ ತಬ್ಲಿಘಿ ಜಮಾತ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಪ್ರಪಂಚದ ಹಲವು ದೇಶಗಳಿಂದ ಬಂದಿದ್ದ ತಬ್ಲಿಘಿ ಸದಸ್ಯರಿಂದ ಕೊರೋನಾ ವ್ಯಾಪಕವಾಗಿ ಹಬ್ಬಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT