ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನ ಮನವೊಲಿಸಲು ಭಾರತ ಹಿಂಬಾಗಿಲ ಪ್ರಯತ್ನ ನಡೆಸಿತ್ತು: ಹರೀಶ್ ಸಾಳ್ವೆ

ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ 2017ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನವನ್ನು ಹಿಂದಿನ ಬಾಗಿಲಿನಿಂದ ರಹಸ್ಯವಾಗಿ ಮನವೊಲಿಸಲು ಭಾರತ ಪ್ರಯತ್ನಿಸಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ಅಡ್ವೊಕೇಟ್ ಹರೀಶ್ ಸಾಳ್ವೆ(ಸಂಗ್ರಹ ಚಿತ್ರ)
Sumana Upadhyaya
Updated On : 4 May 2020, 12:58 pm

ನವದೆಹಲಿ: ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ 2017ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನವನ್ನು ಹಿಂದಿನ ಬಾಗಿಲಿನಿಂದ ರಹಸ್ಯವಾಗಿ ಮನವೊಲಿಸಲು ಭಾರತ ಪ್ರಯತ್ನಿಸಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ಜಾಧವ್ ಕೇಸಿನಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ನಲ್ಲಿ ವಾದಿಸಿದ ಪ್ರಮುಖ ಅಡ್ವೊಕೇಟ್ ಹರೀಶ್ ಸಾಳ್ವೆ ಆಗಿದ್ದರು. ವಿಚಾರಣೆಯನ್ನು ಕಳೆದ ವರ್ಷ ಮುಗಿಸಿದ್ದ ಅಂತಾರಾಷ್ಟ್ರೀಯ ಕೋರ್ಟ್ ಪಾಕಿಸ್ತಾನ ತನ್ನ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಹೇಳಿತ್ತು.

ಆರ್ ಎಸ್ ಎಸ್ ಏರ್ಪಡಿಸಿದ್ದ ಅಖಿಲ ಭಾರತೀಯ ಅಧಿವಕ್ತ ಪರಿಶತ್ ಆನ್ ಲೈ ನ್ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಲಂಡನ್ ನಲ್ಲಿರುವ ಹರೀಶ್ ಸಾಳ್ವೆ ಬಹಿರಂಗಪಡಿಸಿದ್ದು, ಕುಲಭೂಷಣ್ ಜಾಧವ್ ಕೇಸಿನಲ್ಲಿ ಪ್ರಕರಣದ ಮರು ವಿಮರ್ಶೆಗೆ ಪಾಕಿಸ್ತಾನ ಕಡೆಯಿಂದ ಯಾವ ರೀತಿ ಪ್ರಸ್ತಾಪ ಬರಲಿದೆ ಎಂದು ಭಾರತ ಕೇಳುತ್ತಲೇ ಇದೆ. ಆದರೆ ಆ ದೇಶದಿಂದ ಇದುವರೆಗೆ ಯಾವ ಉತ್ತರವೂ ಬಂದಿಲ್ಲ ಎಂದಿದ್ದಾರೆ.

Advertisement

Advertisement

ಕುಲಭೂಷಣ್ ಜಾಧವ್ ಬಿಡುಗಡೆಗೆ ಹಿಂಬದಿ ಬಾಗಿಲಿನಿಂದ ಪ್ರಯತ್ನಿಸಿ ಪಾಕಿಸ್ತಾನದ ಮನವೊಲಿಸಬಹುದೆಂದು ನಾವು ಭಾವಿಸಿದ್ದೆವು. ಮಾನವೀಯ ನೆಲೆಯಲ್ಲಿ ಅವರನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದೆವು. ಪಾಕಿಸ್ತಾನದಲ್ಲಿ ಇದೊಂದು ದೊಡ್ಡ ಅಹಂಭಾವನೆಯ ಸಮಸ್ಯೆಯಾಗಿತ್ತು. ಹೀಗಾಗಿ ಪಾಕಿಸ್ತಾನ ಬಿಟ್ಟುಬಿಡುತ್ತದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಪಾಕಿಸ್ತಾನ ಇದಕ್ಕೊಪ್ಪಲಿಲ್ಲ. ನಾವು ಪಾಕಿಸ್ತಾನಕ್ಕೆ ನಾಲ್ಕೈದು ಬಾರಿ ಪತ್ರ ಬರೆದಿದ್ದೆವು. ಆದರೆ ಪ್ರತಿ ಸಲವೂ  ಪಾಕಿಸ್ತಾನ ನಿರಾಕರಿಸುತ್ತಲೇ ಬಂತು ಎಂದಿದ್ದಾರೆ.

ಪಾಕಿಸ್ತಾನ ನಂತರ ಕೇಸಿನಲ್ಲಿ ಮುಂದುವರಿಯದ ಕಾರಣ ಭಾರತವೀಗ ಪುನಃ ಅಂತಾರಾಷ್ಟ್ರೀಯ ಕೋರ್ಟ್ ಮುಂದೆ ಹೋಗಬೇಕೆ ಎಂಬುದನ್ನು ತೀರ್ಮಾನ ಮಾಡಬೇಕಾಗಿದೆ ಎಂದು ಹರೀಶ್ ಸಾಳ್ವೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement