ಸಾಂದರ್ಭಿಕ ಚಿತ್ರ 
ದೇಶ

ಸಾರಿಗೆ-ಸಂಚಾರ ಮೇ 20ಕ್ಕೆ; ಮಾಲ್, ಚಿತ್ರಮಂದಿರ ಜೂನ್ 1ಕ್ಕೆ ಸಾರ್ವಜನಿಕರಿಗೆ ಮುಕ್ತ?: ರೂಪುರೇಷೆ ಸಿದ್ದತೆಯಲ್ಲಿ ಸರ್ಕಾರ

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಸಮಸ್ಯೆಗಳಿಂದ ಹೊರಬರಲು ಮುಂದಿನ 2 ದಿನಗಳೊಳಗೆ ಕೇಂದ್ರ ಸರ್ಕಾರ ಎರಡನೇ ಹಣಕಾಸು ಪ್ರೋತ್ಸಾಹಕ ಪ್ಯಾಕೆಜ್ ಘೋಷಿಸುವ ಸಾಧ್ಯತೆಯಿದೆ.

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಸಮಸ್ಯೆಗಳಿಂದ ಹೊರಬರಲು ಮುಂದಿನ 2 ದಿನಗಳೊಳಗೆ ಕೇಂದ್ರ ಸರ್ಕಾರ ಎರಡನೇ ಹಣಕಾಸು ಪ್ರೋತ್ಸಾಹಕ ಪ್ಯಾಕೆಜ್ ಘೋಷಿಸುವ ಸಾಧ್ಯತೆಯಿದೆ.

ಇದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಆರು ಸುತ್ತುಗಳ ಸಭೆ ನಡೆಸಿದ್ದು ಪ್ರಧಾನ ಮಂತ್ರಿ ಕಾರ್ಯಾಲಯ ಇಂದು ಕರಡು ಪ್ರಸ್ತಾವನೆ ಸಿದ್ದಪಡಿಸುವ ಸಾಧ್ಯತೆಯಿದೆ.

ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯದ ಐವರು ಕಾರ್ಯದರ್ಶಿಗಳು ಅಂತಿಮ ಸ್ಪರ್ಶ ನೀಡಿದರೆ ಸರ್ಕಾರ ಪ್ರೋತ್ಸಾಹಕ ಹಣಕಾಸು ಪ್ಯಾಕೇಜ್ ನ್ನು ಇನ್ನು ಕೆಲ ದಿನಗಳಲ್ಲಿಯೇ ಘೋಷಿಸಲಿದೆ.

ಸರ್ಕಾರದ ಇನ್ನೊಂದು ಮೂಲದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕೋವಿಡ್-19 ನಿಯಮಗಳೊಂದಿಗೆ ಬಸ್ಸು, ಟ್ಯಾಕ್ಸಿ, ರೈಲು, ಆಟೋರಿಕ್ಷಾಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇ 20ರಿಂದ ಮೆಟ್ರೊ ನಗರಗಳಲ್ಲಿ ಆರಂಭವಾಗಲಿದ್ದು ಜನರಿಗೆ ಈ ಸುದ್ದಿ ಸಮಾಧಾನ ತರಬಹುದು ಎಂದಿವೆ.

ಜೂನ್ 1ಕ್ಕೆ ಮಾಲ್ ಗಳ ತೆರೆಯುವಿಕೆ, ಸಾರ್ವಜನಿಕ ಸಭೆ, ಸಮಾರಂಭಗಳು, ವಿವಾಹ ಕಾರ್ಯಕ್ರಮಗಳು, ಸಿನೆಮಾ ಮಂದಿರಗಳು, ಧಾರ್ಮಿಕ ಕೇಂದ್ರಗಳ ತೆರೆಯುವಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಲಿದೆ. ಈ ಬಗ್ಗೆ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿ ಅಂತಿಮಗೊಳಿಸುವ ಕಾರ್ಯ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT