ಸಂಗ್ರಹ ಚಿತ್ರ 
ದೇಶ

ವಲಸಿಗರು ನಾಯಿಗಳಲ್ಲ: ಉತ್ತರಪ್ರದೇಶ ಸರ್ಕಾರದ ಅಮಾನವೀಯ ವರ್ತನೆ ವಿರುದ್ಧ ಶಿವಸೇನೆ ಕಿಡಿ

ರಾಜ್ಯಕ್ಕೆ ವಾಪಸ್ಸಾಗಲು ಇಚ್ಛಿಸುವ ವಲಸಿಗ ಕಾರ್ಮಿಕರು ರಾಜ್ಯ ಪ್ರವೇಶಿಸುವುದಕ್ಕೂ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ  ಉತ್ತರಪ್ರದೇಶ ಸರ್ಕಾರದ ಆದೇಶಕ್ಕೆ ಶಿವಸೇನೆ ತೀವ್ರವಾಗಿ ಕಿಡಿಕಾರಿದೆ.

ಮುಂಬೈ: ರಾಜ್ಯಕ್ಕೆ ವಾಪಸ್ಸಾಗಲು ಇಚ್ಛಿಸುವ ವಲಸಿಗ ಕಾರ್ಮಿಕರು ರಾಜ್ಯ ಪ್ರವೇಶಿಸುವುದಕ್ಕೂ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ  ಉತ್ತರಪ್ರದೇಶ ಸರ್ಕಾರದ ಆದೇಶಕ್ಕೆ ಶಿವಸೇನೆ ತೀವ್ರವಾಗಿ ಕಿಡಿಕಾರಿದೆ. 

ಈ ಕುರಿತು ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ವಲಸಿಗ ಕಾರ್ಮಿಕರ ಕುರಿತಂತೆ ಉತ್ತರಪ್ರದೇಶ ಸರ್ಕಾರ ಹೊರಡಿಸಿರುವ ಆದೇಶ ಕ್ರೂರ ಹಾಗೂ ಅಮಾನವೀಯವಾದದ್ದು ಎಂದು ಹೇಳಿಕೊಂಡಿದೆ. 

ಇದೇ ವೇಳೆ ರಾಜಸ್ತಾನದ ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಗಳಿಲ್ಲದೆ ರಾಜ್ಯಕ್ಕೆ ವಾಪಸ್ಸಾಗಲು ಅನುಮತಿ ನೀಡಿದ್ದನ್ನೂ ಕೂಡ ಶಿವಸೇನೆ ಟೀಕೆ ಮಾಡಿದ್ದು, ಕೋಟಾದಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳು ಶ್ರೀಮಂತರಾಗಿದ್ದ ಕಾರಣ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು ಎಂದು ತಿಳಿಸಿದೆ. 

ಅಲ್ಲದೆ ಇದೇ ವೇಳೆ ವಲಸಿಗ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಅಧಿಕಾರದಲ್ಲಿರುವ ಆಯಾ ರಾಜ್ಯಗಳು ಭರಿಸಲಿವೆ ಎಂದ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿಯವರ ಹೇಳಿಕೆಯನ್ನು ಕೊಂಡಾಡಿದೆ. 
                                                                                                                                                            
ನಿನ್ನೆಯವರೆಗೂ ಇದೇ ವಲಸಿಗ ಕಾರ್ಮಿಕರು ರಾಜಕೀಯ ನಾಯಕರಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ವೋಟ್ ಬ್ಯಾಂಕ್ ಆಗಿದ್ದರು. ಮಂಬೈ ಹಾಗೂ ಮಹಾರಾಷ್ಟ್ರ ರಾಜ್ಯಗಳು ಇವರ ಪರಿಶ್ರಮದಿಂದೇ ನಿರ್ಮಾಣಗೊಂಡಿದೆ. ಬಿಕ್ಕಟ್ಟಿ ಸಂದರ್ಭದಲ್ಲಿ ಜನರು ಓಡುತ್ತಿದ್ದು, ಇದೀಗ ರಾಜಕೀಯ ನಾಯಕರು ಅವರನ್ನು ದೂರವಿಡುತ್ತಿದ್ದಾರೆ. 

ಉತ್ತರಪ್ರದೇಶ ಸರ್ಕಾರದ ಆದೇಶ ಕ್ರೂರ ಹಾಗೂ ಅಮಾನವೀಯವಾದದ್ದು. ಅಲ್ಲಿನ ಸರ್ಕಾರ ಬಡವರಿಗೊಂಡು, ಶ್ರೀಮಂತರಿಗೊಂದು ನಿಯಮವನ್ನು ಮಾಡುತ್ತಿದೆ. ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ನೂರಾರು ಬಸ್ಸುಗಳನ್ನು ಕಳುಹಿಸಿಕೊಟ್ಟಿತ್ತು. ಈ ವೇಳೆ ಯಾರನ್ನೂ ಪರೀಕ್ಷೆಗೊಳಪಡಿಸಲಿಲ್ಲ. ಆದರೆ, ಬಡವರಿಗೆ ಪ್ರಯಾಣ ಬೆಳೆಸಲು ರೈಲುಗಳ ಟಿಕೆಟ್ ದರಗಳನ್ನ ಏರಿಕೆ ಮಾಡಲಾಗುತ್ತಿದೆ. 

ಮಾನವೀಯತೆ ಆಧಾರ ಮೇಲೆ ಸೋನಿಯಾ ಅವರು ಸಹಾಯ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ವಲಸಿಗರೇನು ನಾಯಿ, ಬೆಕ್ಕುಗಳಲ್ಲ. ಆದರೆ, ಅವರ ತವರಿನ ರಾಜ್ಯಗಳು ಮಾನವೀಯತೆಯನ್ನೇ ತೋರಿಸುತ್ತಿಲ್ಲ ಎಂದು ತಿಳಿಸಿದೆ. 

ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಹೇಳಿಕೆಯನ್ನು ನೆನೆದಿರುವ ಶಿವಸೇನೆ, ವಲಸಿಗ ಕಾರ್ಮಿಕರೇನೋ ಮಹಾರಾಷ್ಟ್ರದಿಂದ ಓಡಿಹೋಗಬಹುದು. ಆದರೆ, ತಮ್ಮ ತವರಿನಲ್ಲೇನು ಸೇವನೆ ಮಾಡುತ್ತಾರೆಂದು ಗಡ್ಕರಿ ನೀಡಿದ್ದ ಹೇಳಿಕೆ ಸರಿಯಾಗಿದೆ ಎಂದು ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel