ದೇಶ

ಕೇಂದ್ರ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ಪ್ರಸ್ತಾವನೆ ಇಲ್ಲ: ಕೇಂದ್ರ ಹಣಕಾಸುಸಚಿವಾಲಯ

Lingaraj Badiger

ನವದೆಹಲಿ: ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನ ಕಡಿತಗೊಳಿಸಲಿದೆ ಎಂಬ ವರದಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಳ್ಳಿಹಾಕಿದೆ. ಈ ವರದಿಗಳು ನಿರಾಧಾರ, ಅವಾಸ್ತವ ಎಂದು ಸ್ಪಷ್ಟಪಡಿಸಿದೆ.

ಯಾವುದೇ ವರ್ಗಕ್ಕೆ ಸೇರಿದ ಕೇಂದ್ರ ಸರ್ಕಾರಿ ಉದ್ಯೋಗಿಗಳ ಪ್ರಸ್ತುತ ವೇತನಗಳಲ್ಲಿ ಕಡಿತಗೊಳಿಸುವಂತಹ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ. ಈ ಸಂಬಂಧ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಂಡ ವರದಿಗಳು ನಿರಾಧಾರ ಎಂದು ಹೇಳಿದೆ.

ಜೊತೆಗೆ ನಿವೃತ್ತ ಉದ್ಯೋಗಿಗಳ ಪಿಂಚಣಿಯಲ್ಲೂ ಯಾವುದೇ ರೀತಿಯ ಕಡಿತ ಗೊಳಿಸುವುದಿಲ್ಲ, ತುರ್ತು ಸಮಯದಲ್ಲಿ ವೇತನಗಳು, ಪಿಂಚಣಿಯನ್ನು ತಗ್ಗಿಸುವ, ಇಲ್ಲವೇ ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಈ ಹಿಂದೆ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿತ್ತು.

ಕೇಂದ್ರ ಸರ್ಕಾರಿ ನೌಕರರ ಪಿಂಚಣಿಯಲ್ಲಿ ಶೇ. ೨೦ರಷ್ಟು ಕಡಿತಗೊಳಿಸಲಿದೆ ಎಂಬ ವದಂತಿಗಳು ಹಬ್ಬಿವೆ. ಇದು ಸಂಪೂರ್ಣ ಅವಾಸ್ತವ ಎಂದು ಹೇಳಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು, ಪಿಂಚಂಣಿದಾರರು, ಇಂತಹ ವರದಿ ಹಾಗೂ ವದಂತಿಗಳನ್ನು ನಂಬಬಾರದು ಎಂದು ಸೂಚನೆ ನೀಡಿದೆ.

SCROLL FOR NEXT