ಶತ್ರುಗಳೇ ಎಚ್ಚರ!: ಜುಲೈ ತಿಂಗಳಾಂತ್ಯಕ್ಕೆ ಬರಲಿದೆ 4 ರಾಫೆಲ್ ಫೈಟರ್ ಜೆಟ್
ಭಾರತ ಖರೀದಿಸಿರುವ 36 ರಾಫೆಲ್ ಫೈಟರ್ ಜೆಟ್ ಗಳ ಪೈಕಿ 4 ರಾಫೆಲ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ.
ನವದೆಹಲಿ: ಭಾರತ ಖರೀದಿಸಿರುವ 36 ರಾಫೆಲ್ ಫೈಟರ್ ಜೆಟ್ ಗಳ ಪೈಕಿ 4 ರಾಫೆಲ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ.
ಕೊರೋನಾ ಭೀತಿಯ ನಡುವೆಯೂ ಇದು ಭಾರತದ ಮಟ್ಟಿಗೆ ಸಂತಸದ ಸುದ್ದಿಯಾಗಿದೆ. ಕೋವಿಡ್-19 ರ ಕಾರಣದಿಂದಾಗಿಯೇ ರಾಫೆಲ್ ಗಳ ಆಗಮನ 11 ವಾರ ವಿಳಂಬವಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಬರಬೇಕಿದ್ದ ರಾಫೆಲ್ ಜೆಟ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತ ತಲುಪುತ್ತಿವೆ.
58,000 ಕೋಟಿ ರೂಪಾಯಿ ಮೊತ್ತದ 36 ರಾಫೆಲ್ ಜೆಟ್ ಗಳ ಖರೀದಿಗೆ 2016 ರಲ್ಲಿ ಭಾರತ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.