ದೇಶ

6 ನೌಕರರಲ್ಲಿ ಕೊರೋನಾ ಪಾಸಿಟಿವ್: ದೆಹಲಿ ಒಪೋ ಮೊಬೈಲ್ ಫೋನ್ ತಯಾರಿಕಾ ಘಟಕ ಬಂದ್

Srinivasamurthy VN

ನವದೆಹಲಿ: ಕಂಪನಿಯ 6 ಮಂದಿ ನೌಕರರಲ್ಲಿ ಮಹಾಮಾರಿ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಬಳಿಯಿರುವ ಒಪೋ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಬಂದ್ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ. 

ಈ ಬಗ್ಗೆ ಸ್ವತಃ ಒಪೋ ಫೋನ್ ಕಂಪನಿಯೇ ಅಧಿಕೃತವಾಗಿ ಹೇಳಿಕೆ ನೀಡಿದೆ. ಒಂದು ಸಂಸ್ಥೆಯಾಗಿ ನಮ್ಮ ಎಲ್ಲಾ ಉದ್ಯೋಗಿಗಳು ಹಾಗೂ ನಾಗರೀಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹೀಗಾಗಿ ಗ್ರೇಟರ್ ನೊಯ್ಡೊದಲ್ಲಿನ ನಮ್ಮ ಉತ್ಪಾದನಾ ಕೇಂದ್ರದಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಸ್ಧಗಿತಗೊಳಿಸಲಾಗಿದೆ. ಅಲ್ಲದೆ, ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 3000 ನೌಕರರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಕೇಂದ್ರ ಗೃಹ ಸಚಿವಾಲಯದ ಆದೇಶದ ಅನ್ಯಯ ತಿಂಗಳ ಹಿಂದಷ್ಟೇ ಒಪೋ ಸೇರಿದಂತೆ ಇತರೆ ಮೊಬೈಲ್ ಫೋನ್ ತಯಾರಿಕಾ ಘಟಕಗಳು ತಮ್ಮ ತಮ್ಮ ಕಾರ್ಯಗಳನ್ನು ಆರಂಭಿಸಿದ್ದವು. 

ಕಾರ್ಯಾರಂಭ ಆರಂಭವಾದ ಕೆಲವೇ ದಿನಗಳಲ್ಲಿ ಇದೀಗ ಒಪೋ ಮೊಬೈಲ್ ಫೋನ್ ತಯಾರಿಕಾ ಘಟಕದಲ್ಲಿ 6 ಮಂದಿ ನೌಕರರಲ್ಲಿ ವೈರಸ್ ದೃಢಪಟ್ಟಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

SCROLL FOR NEXT