ದೇಶ

ಕೋವಿಡ್ ನಿಂದ ವಿದೇಶದಲ್ಲಿ ವಿದ್ಯಾಭ್ಯಾಸದ ಕನಸಿಗೆ ಧಕ್ಕೆ? ಕೇಂದ್ರದಿಂದ ಜೆಇಇ-ಮೈನ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಹೊಸ ಅವಕಾಶ 

ಕೋವಿಡ್ -19 ಕಾರಣದಿಂದಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು  ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆಯ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್-ಮೈನ್ ಗೆ ಅರ್ಜಿ ಸಲ್ಲಿಸಲು ಹೊಸ ಅವಕಾಶ ಸಿಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳಿದೆ.

ನವದೆಹಲಿ: ಕೋವಿಡ್ -19 ಕಾರಣದಿಂದಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು  ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆಯ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್-ಮೈನ್ ಗೆ ಅರ್ಜಿ ಸಲ್ಲಿಸಲು ಹೊಸ ಅವಕಾಶ ಸಿಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳಿದೆ.

"ವಿದೇಶದಲ್ಲಿ ಕಾಲೇಜುಗಳಿಗೆ ಸೇರಲು ನಿರ್ಧರಿಸಿದ್ದ ಆದರೆ ಈಗ ಭಾರತದಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲು ಉತ್ಸುಕರಾಗಿರುವ ವಿವಿಧ ಭಾರತೀಯ ವಿದ್ಯಾರ್ಥಿಗಳಿಂದ  ಬಂದ ಮನವಿಯ ಹಿನ್ನೆಲೆಯಲ್ಲಿ ಕೋವಿಡ್ -19 ನಿಂದ ಉಂಟಾದ ಬದಲಾದ ಸನ್ನಿವೇಶಗಳಿಂದಾಗಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)  ಜೆಇಇಗಾಗಿ ಹೊಸ ಅವಕಾಶವೊಂದನ್ನು ನೀಡಿದೆ""ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಹೇಳಿದರು.

ಮಂಗಳವಾರ ಪ್ರಾರಂಭವಾದ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮೈನ್) ಅರ್ಜಿ ಸಲ್ಲಿಕೆಗೆ ಮೇ 24ಕ್ಕೆ ಕಡೇ ದಿನವಾಗಿದೆ. "ಇತರ ಕಾರಣಗಳಿಂದಾಗಿ ತಮ್ಮ ಅರ್ಜಿ ನಮೂನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಸಹ ಈ ಅವಕಾಶವನ್ನು ಬಳಸಿಕೊಳ್ಳಬಹುದು" ಎಂದು ಎನ್‌ಟಿಎ ನಿರ್ದೇಶಕ ವಿನೀತ್ ಜೋಶಿ ಹೇಳಿದರು.

ಈ ಮೊದಲು ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಮತ್ತು ಲಾಕ್‌ಡೌನ್ ನಿರ್ಬಂಧದಿಂದಾಗಿ ಮುಂದೂಡಲ್ಪಟ್ಟ ಈ ಪರೀಕ್ಷೆಯು ಜುಲೈ 18 ರಿಂದ 23 ರವರೆಗೆ ನಡೆಸಲಾಗುವುದು. 

ಕೋವಿಡ್ -19 ಸಾಂಕ್ರಾಮಿಕ ರೋಗವು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಶೇಕಡಾ 48 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ  ಕನಸಿಗೆ ಕೊಳ್ಳಿ ಇಟ್ಟಿದೆ ಎಂದು ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವರದಿ ತಿಳಿಸಿದೆ, ಈಗಾಗಲೇ ದುಬಾರಿಯಾಗಿರುವ ಅಂತರರಾಷ್ಟ್ರೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆಯ ಮೇಲೆ ಕೊರೋನಾ ಗಮನಾರ್ಹವಾಗಿ ಪರಿಣಾಮ ಬೀರಿದೆ. ಕೊರೋನಾ ನಂತರದ ಜಗತ್ತಿನಲ್ಲಿ ಉದ್ಯೋಗದ ಸಾಧ್ಯತೆಗಳು ಮತ್ತಷ್ಟು ಕಡಿಮೆಯಾಗುವುದು ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕ್ಯೂಎಸ್‌ನ ತಜ್ಞರು ಗಮನಸೆಳೆದಿದ್ದಾರೆ. ಕೊರೋನಾವೈರಸ್ ಮಾರಣಾಂತಿಕ ವೈರಸ್ ಹಲವಾರು ದೇಶಗಳನ್ನು ಲಾಕ್ ಮಾಡಿಸಿದೆ. ನೇಕ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿದ್ದು , ವಿದ್ಯಾರ್ಥಿಗಳವಿದೇಶದ ಅದ್ಯಯನ ಯೋಜನೆಗಳನ್ನು ವಿಳಂಬಗೊಳಿಸುತ್ತದೆ ಇಲ್ಲವೆ ಅಡ್ಡಿಯಾಗುತ್ತದೆ.

ಏತನ್ಮಧ್ಯೆ, ಜೆಆರ್‌ಇ-ಮೈನ್ ಹಾಗೂ  ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್‌ನಮಾಕ್ ಟೆಸ್ಟ್ ಗಾಗಿ  'ನ್ಯಾಷನಲ್ ಟೆಸ್ಟ್ ಅಭ್ಯಾಸ್' ಎಂಬ ಕೃತಕ ಬುದ್ಧಿಮತ್ತೆ-ಚಾಲಿತ ಮೊಬೈಲ್ ಅಪ್ಲಿಕೇಶನ್ ಅನ್ನು ಮಾನವ ಸಂಪನ್ಮೂಲ ಸಚಿವರು ಪ್ರಾರಂಭಿಸಿದರು. "ಎನ್ಟಿಎ ವ್ಯಾಪ್ತಿಯಲ್ಲಿ ಜೆಇಇ-ಮೈನ್ , ನೀಟ್ ನಂತಹ ಮುಂಬರುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಮಾಕ್ ಟೆಸ್ಟ್ ಗಳನ್ನು ನಡೆಸಲು ಅನುವು ಮಾಡಿಕೊಡುವಂತೆ ಈ ಅಪ್ಲಿಕೇಶನ್ ಅನ್ನು ಎನ್ಟಿಎ ಅಭಿವೃದ್ಧಿಪಡಿಸಿದೆ."ಶಿಕ್ಷಣ ಸಂಸ್ಥೆಗಳು ಮತ್ತು ಎನ್‌ಟಿಎಯ ಪರೀಕ್ಷಾ-ಅಭ್ಯಾಸ ಕೇಂದ್ರಗಳನ್ನು ಮುಚ್ಚುವುದರಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗಿದ್ದು ಇದಕ್ಕೆ ಪರಿಹಾರವೆನ್ನುವಂತೆ  ಅಭ್ಯರ್ಥಿಗಳು ತಮ್ಮ ಮನೆಗಳಲ್ಲಿಯೇ  ಸುರಕ್ಷತೆ ಮತ್ತು ಸೌಕರ್ಯದಿಂದ ಉತ್ತಮ ಗುಣಮಟ್ಟದ  ಮಾಕ್ ಟೆಸ್ಟ್ ಗೆ ಪ್ರವೇಶಿಸಲು ಅನುಕೂಲವಾಗುವಂತೆ ಇದನ್ನು ಪ್ರಾರಂಭಿಸಲಾಗಿದೆ."ಎಂದು ಮಾನವ ಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್