ಭಾರತದಲ್ಲಿ ಲಾಕ್ ಡೌನ್ ವೇಳೆ ಒಟಿಟಿ ಚಂದಾದಾರ ಸಂಖ್ಯೆ ಗಣನೀಯ ಏರಿಕೆ! 
ದೇಶ

ಭಾರತದಲ್ಲಿ ಲಾಕ್ ಡೌನ್ ವೇಳೆ ಒಟಿಟಿ ಚಂದಾದಾರ ಸಂಖ್ಯೆ ಗಣನೀಯ ಏರಿಕೆ! 

ಲಾಕ್ ಡೌನ್ ಅವಧಿಯಲ್ಲಿ ಭಾರತದಲ್ಲಿ ಓವರ್ ದಿ ಟಾಪ್ (ಒಟಿಟಿ) ವಿಭಾಗದ ಚಂದಾದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಭಾರತದಲ್ಲಿ ಓವರ್ ದಿ ಟಾಪ್ (ಒಟಿಟಿ) ವಿಭಾಗದ ಚಂದಾದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 

ಶೇ.75 ರಷ್ಟಕ್ಕಿಂತಲೂ ಹೆಚ್ಚಿನ ಭಾರತೀಯರು ಲಾಕ್ ಡೌನ್ ಅವಧಿಯಲ್ಲಿ ವಿವಿಧ ಒಟಿಟಿ ವಿಭಾಗಗಳಲ್ಲಿ ಚಂದಾದಾರತ್ವ ಖರೀದಿಸಿದ್ದಾರೆ ಎಂದು ಹೊಸ ಸಮೀಕ್ಷೆ ಮೂಲಕ ತಿಳಿದುಬಂದಿದೆ.

ಮಾರುಕಟ್ಟೆ ಹಾಗೂ ವಿಶ್ಲೇಷಣಾ ಸಂಸ್ಥೆ ವೆಲೋಸಿಟಿ ಎಂಆರ್ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ 3,000 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು ಈ ಪೈಕಿ ಶೇ.73 ರಷ್ಟು ಜನರು ಹಾಟ್ ಸ್ಟಾರ್ ಹಾಗೂ ಯ್ಯೂಟ್ಯೂಬ್  ನ್ನು ವೀಕ್ಷಿಸಲು ಪ್ರಾರಂಭಿಸಿದ್ದರೆ ಅಮೇಜಾನ್ ಪ್ರೈಮ್ ನೆಟ್ ಫ್ಲಿಕ್ಸ್ (ಒಟಿಟಿ ವಿಭಾಗ) ಗಳ ವೀಕ್ಷಕರು, ಚಂದಾರಾರ ಸಂಖ್ಯೆ ಅನುಕ್ರಮವಾಗಿ ಶೇ.67, ಶೇ.65 ರಷ್ಟು ಏರಿಕೆಯಾಗಿದೆ. 

ಇನ್ನು ಸಾಮಾಜಿಕ ಜಾಲತಾಣದ ಆಪ್ ಗಳಾದ ವಾಟ್ಸ್ ಆಪ್ ಗಳನ್ನು ಬಳಕೆ ಮಾಡುವವರ ಸಂಖ್ಯೆ ಶೇ.92, ಯೂಟ್ಯೂಬ್ ಬಳಕೆದಾರರ ಸಂಖ್ಯೆ ಶೇ.84, ಫೇಸ್ ಬುಕ್ ಬಳಕೆದಾರರ ಸಂಖ್ಯೆ ಶೇ.80 ರಷ್ಟು ಲಾಕ್ ಡೌನ್ ವೇಳೆ ಏರಿಕೆ ಕಂಡಿದೆ.

ಲಾಕ್ ಡೌನ್ ಅವಧಿಯಲ್ಲಿ ಶೇ.80 ರಷ್ಟು ಜನರು ಸಿನಿಮಾ ವೀಕ್ಷಿಸುವುದನ್ನು ಇಷ್ಟಪಟ್ಟರೆ, ರಾಷ್ಟ್ರೀಯ ಸುದ್ದಿಯನ್ನು ವೀಕ್ಷಿಸುವವರ ಸಂಖ್ಯೆ ಶೇ.65 ರಷ್ಟು ಏರಿಕೆಯಾಗಿದೆ ಎಂದು ವೆಲೋಸಿಟಿ ಎಂಆರ್ ಸಮೀಕ್ಷೆ ಮೂಲಕ ತಿಳಿದುಬಂದಿದೆ. ಇನ್ನು ಲಾಕ್ ಡೌನ್ ಅವಧಿಯನ್ನು ಕೌಶಲಗಳನ್ನು ವೃದ್ಧಿಸಿಕೊಳ್ಳುವುದಕ್ಕೆ ಸಿಕ್ಕಿರುವ ಉತ್ತಮ ಅವಕಾಶ ಎಂದು ಶೇ.52 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಇ-ಕಲಿಕೆ ಸಂಸ್ಥೆಗಳಾದ ಬೈಜ್ಯೂಸ್ ಲಾಕ್ ಡೌನ್ ಅವಧಿಯಲ್ಲಿ ಶೇ.33 ರಷ್ಟು ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT