ದೇಶ

ಭಾರತದಲ್ಲಿ ಕೊರೋನಾ ಸೋಂಕು: ಮಹಾರಾಷ್ಟ್ರ ನಂತರ 2ನೇ ಸ್ಥಾನದಲ್ಲಿ ತಮಿಳುನಾಡು

Shilpa D

ಚೆನ್ನೈ: ಮಹಾರಾಷ್ಟ್ರ ನಂತರ ಕೊರೋನಾ ಸೋಂಕಿತರ ಪ್ರಮಾಣದಲ್ಲಿ  ತಮಿಳುನಾಡು 2ನೇ ಸ್ಥಾನದಲ್ಲಿದೆ.ಮಂಗಳವಾರ ಮಹಾರಾಷ್ಟ್ರದಲ್ಲಿ 688 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ 12,448 ಕೇಸ್ ಪತ್ತೆಯಾಗಿದೆ. ಗುರುವಾರದವರೆಗೆ ಗುಜರಾತಿನಲ್ಲಿ  11.745 ಪ್ರಕರಣಗಳು ದಾಖಲಾಗಿ 2ನೇ ಸ್ಥಾನದಲ್ಲಿತ್ತು.

ತಮಿಳುನಾಡಿನಲ್ಲಿ ಇದುವರೆಗೂ 84 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ, ಚೆನ್ನೈನಲ್ಲಿ ಹೊಸದಾಗಿ 552 ಕೇಸ್ ಪತ್ತೆಯಾಗಿದ್ದು, ಚೆನ್ನೈ ಒಂದರಲ್ಲಿ 7,672 ಪ್ರಕರಣ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದರೂ ಸರ್ಕಾರ ಲಾಕ್ ಡೌನ್ ಸಡಿಲಿಸಿಲ್ಲ.

ಆದರೆ ತಮಿಳುನಾಡು ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಸಲೂನ್ ತೆರೆಯಲು ಅನುಮತಿ ನೀಡಿದೆ. ತಮಿಳುನಾಡಿನಲ್ಲಿ ಕೆಲ  ಕಾರ್ಖಾನೆಗಳು ಕೂಡ ಆರಂಭವಾಗಿವೆ. ಮೇ 16 ರಿಂದ ಮಧ್ಯದಂಗಡಿ ಕೂಡ ಅರಂಭವಾಗಿವೆ.
 

SCROLL FOR NEXT