ರುದ್ರಪಶುಪತಿ ಶಿವಾಚಾರ್ಯ 
ದೇಶ

ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಬರ್ಬರ ಹತ್ಯೆ!

ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರು ಮಹಾರಾಷ್ಟ್ರದಲ್ಲಿ ಕಳ್ಳರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.

ನಾಂದೇಡ್: ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರು ಮಹಾರಾಷ್ಟ್ರದಲ್ಲಿ ಕಳ್ಳರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.

ಮಠದಲ್ಲಿ ಕಳ್ಳತನಕ್ಕೆ ಬಂದ ಕಳ್ಳರು ಪೀಠಾಧಿಪತಿಯ ಹತ್ಯೆಮಾಡಿ‌ ನಂತರ ಮಠದಲ್ಲಿ ಕೆಲಸಮಾಡುತ್ತಿದ್ದ ಮತ್ತೋರ್ವ 50 ವ್ಯಕ್ತಿಯನ್ನ ಸಹ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ತೆಯಾದ ಶ್ರೀಗಳು ಗಣಿನಾಡು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದೀಪುರ ಗ್ರಾಮದ ದೊಡ್ಡಬಸವೇಶ್ವರ ಮಠದ ಚರಂತಪ್ಪಜ್ಜನವರ ಮಗ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳೇ ಹತ್ಯೆಗೀಡಾದ ಸ್ವಾಮೀಜಿಗಳು.

ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಯಾಗಿದ್ದ ಶ್ರೀಗಳು ಹಲವು ವರ್ಷಗಳಿಂದ ಅಲ್ಲೇ ವಾಸವಾಗಿದ್ರು, ನಾಗಠಾಣದ ನಿರ್ವಾಣಿ ಮಠ ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದರಿಂದ ಮಹಾರಾಷ್ಟ್ರದಲ್ಲಿ ದೊಡ್ಡ ಭಕ್ತ ಸಮೂಹವನ್ನ ಹೊಂದಿದ್ರು ಶ್ರೀಗಳು, ನಿನ್ನೆ ತಡರಾತ್ರಿ ಬಂದ ಕಳ್ಳರ ಗುಂಪು ಶ್ರೀಗಳನ್ನ ಹತ್ಯೆಮಾಡಿ ನಂತರ ಮಠದಲ್ಲಿ‌ಕೆಲಸಮಾಡುತಿದ್ದ ಕೆಲಸಗಾರನನ್ನ ಸಹ ಕೊಲೆಮಾಡಿ ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ವಿಷಯ ಬಹಿರಂಗವಾಗಿದ್ದು ರುದ್ರಪಶುಪತಿ ಶ್ರೀಗಳ ಸಹೋದರರಾದ ನಂದಿಪುರ ಮಠದ ಮಹೇಶ್ವರ ಮಹಾಸ್ವಾಮಿಗಳು ಇಂದು‌ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಶ್ರೀಗಳ ಕೊಲೆ ಹಲವು ಹನುಮಾನ್ನ ಮೂಡಿಸಿದ್ದು ತನಿಖೆಯ ನಂತರ ಎಲ್ಲವೂ ಬಯಲಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT