ದೇಶ

ಮನೇಸರ್ ಮಾರುತಿ ಸೂಜಿಕಿ ಘಟಕದ ನೌಕರನಿಗೆ ಕೊರೋನಾ ಸೋಂಕು! 

Srinivas Rao BV

ನವದೆಹಲಿ: ಲಾಕ್ ಡೌನ್ ನಂತರ ಮಾರುತಿ ಸುಜೂಕಿ ಸಂಸ್ಥೆಯ ಮನೇಸರ್ ಘಟಕ ಪುನಃ ಕಾರ್ಯಾರಂಭ ಮಾಡಿದ 10 ದಿನಗಳಲ್ಲೇ ಅಲ್ಲಿನ ನೌಕರನೋರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಸಂಸ್ಥೆಯ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೋನಾ ವೈರಸ್ ನ ಎರಡನೇ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. 

ಮೇ.15 ರಂದು ಆರೋಗ್ಯವಾಗಿದ್ದ ನೌಕರನಿಗೆ ಮೇ.22 ರಂದು ಸೋಂಕು ತಗುಲಿರುವುದು ಕಂಡುಬಂದಿದೆ. ಉದ್ಯೋಗಿಯ ಮನೆ ಇರುವ ಪ್ರದೇಶ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಅಂದಿನಿಂದ ಆತ ಕೆಲಸಕ್ಕೆ ಹಾಜರಾಗಿರಲಿಲ್ಲ ಎಂದು ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ. 

ಈ ಮಾಹಿತಿಯಲ್ಲಿ ಸಂಸ್ಥೆ ಮನೇಸರ್ ವ್ಯಾಪ್ತಿಗೆ ಬರುವೆ ಜಿಲ್ಲಾಡಳಿತಕ್ಕೆ ತಲುಪಿಸಿದೆ. ಸೋಂಕಿತ ಉದ್ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಂಸ್ಥೆ ಸೋಂಕಿತ ಉದ್ಯೋಗಿಗೆ ಸಹಾಯ ಹಾಗೂ ಸಹಕಾರ ನೀಡುತ್ತಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಸ್ಪಷ್ಟಪಡಿಸಿದೆ. ಈ ಉದ್ಯೋಗಿಯೊಂದಿಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕಲೆಹಾಕಿದ್ದು, ಸಂಪರ್ಕದಲ್ಲಿದ್ದವರಿಗೆ ಐಸೊಲೇಷನ್ ನಲ್ಲಿರುವಂತೆ ಸೂಚಿಸಲಾಗಿದೆ. 

SCROLL FOR NEXT