ದೇಶ

ಭಾರತ-ಚೀನಾ ಗಡಿಯಲ್ಲಿ ಸದ್ಯ ಏನು ನಡೆಯುತ್ತಿದೆ, ಅಲ್ಲಿ ಪರಿಸ್ಥಿತಿ ಈಗ ಹೇಗಿದೆ?: ಅಧಿಕಾರಿಗಳು ಏನನ್ನುತ್ತಾರೆ?

Sumana Upadhyaya

ನವದೆಹಲಿ: ಲಡಾಕ್ ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ(ಎಲ್ಎಸಿ) ಕಳೆದ ಕೆಲ ದಿನಗಳಿಂದ ಭಾರತ ಮತ್ತು ಚೀನಾ ಸೇನಾಪಡೆಗಳಿಂದ ಹೆಚ್ಚುವರಿ ಸೇನೆಯ ಚಲನವಲನ ಅಥವಾ ಹೊಸ ಚಟುವಟಿಕೆಗಳು ನಡೆದಿಲ್ಲ. ಎರಡೂ ದೇಶಗಳ ಸೇನೆಗಳು ಇಲ್ಲಿಂದ ಭಾರೀ ವಾಹನಗಳನ್ನು ಹಿಂತೆಗೆದುಕೊಂಡಿವೆ. ಸದ್ಯ ಸೇನೆ ಯಥಾಸ್ಥಿತಿ ನಿಲುಗಡೆಯಲ್ಲಿದೆ. ಇದು ಲಡಾಕ್ ನ ಭಾರತ-ಚೀನಾ ಗಡಿಯಲ್ಲಿನ ಸದ್ಯದ ಪರಿಸ್ಥಿತಿ.

ಎರಡೂ ದೇಶಗಳ ಗಡಿಭಾಗಕ್ಕೆ ಹತ್ತಿರವಾಗಿ ಬಂದಿದ್ದ ಸೇನಾಪಡೆಯ ವಾಹನಗಳು ಇತ್ತೀಚೆಗೆ ಯಾವುದೇ ಚಲನವಲನ ನಡೆಸಿಲ್ಲ. ನಿಯೋಜಿಸಲಾಗಿದ್ದ ಸೇನಾಪಡೆ ಮತ್ತು ವಾಹನಗಳನ್ನು ಅವುಗಳ ಮೂಲಸ್ಥಾನಕ್ಕೆ ಕಳುಹಿಸಲಾಗಿದೆ, ಆದರೂ ಅಲ್ಲಿ ಸದ್ಯ ಪರಿಸ್ಥಿತಿ ಆತಂಕದಲ್ಲಿದ್ದು ಸೇನಾಪಡೆಗಳು ನಿಲುಗಡೆ ಸ್ಥಾನದಲ್ಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ಮೇ 5ರಂದು ಚೀನಾ ಮತ್ತು ಭಾರತದ ಸೇನಾ ಯೋಧರು ಲಡಾಕ್ ನ ಗಡಿಭಾಗದಲ್ಲಿ ಮುಖಾಮುಖಿಯಾಗಿ ಕದನದಲ್ಲಿ ತೊಡಗಿದಾಗ ಪರಿಸ್ಥಿತಿ ಉಲ್ಭಣಿಸಿತ್ತು. ಎರಡೂ ಕಡೆ ಸೇನೆಯ ಸೆಕ್ಟರ್ ಕಮಾಂಡರ್ ಮತ್ತು ವಿಭಾಗೀಯ ಕಮಾಂಡರ್ ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದವು. ಕೆಲವು ವಿಷಯಗಳ ಮೇಲೆ ಒಪ್ಪಂದ ನಡೆದು ಕೆಲವು ವಿಷಯಗಳಲ್ಲಿ ಸಹಮತಕ್ಕ ಬರಲಿಲ್ಲ ಎಂದು ಮೂಲಗಳು ಹೇಳುತ್ತವೆ.

ಎರಡೂ ದೇಶಗಳ ಸೇನಾಪಡೆಗಳು ಪಾಂಗೊಂಗ್ ತ್ಸೊದಲ್ಲಿ ಫಿಂಗರ್ ಫೋರ್‌ಗೆ ಹತ್ತಿರವಿರುವ ಹಿಂಸಾಪೀಡಿತ ಪ್ರದೇಶದಲ್ಲಿದೆ. ಯಾವುದೇ ಕ್ಷಣದಲ್ಲಿ ಯುದ್ಧವೇರ್ಪಡುವ ಸಾಧ್ಯತೆಯಿದ್ದು ಸೇನೆ ಸನ್ನದ್ಧವಾಗಿವೆ.ಈ ಸಮಯದಲ್ಲಿ ಚೀನಾದ ಯಾವುದೇ ಕ್ರಮಗಳನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT