ದೇಶ

ಲಾಕ್‌ಡೌನ್ ಒಂದೇ ಅಂತಿಮ ಪರಿಹಾರವಲ್ಲ: ಹಾರ್ವರ್ಡ್ ಪ್ರಾಧ್ಯಾಪಕ ಆಶಿಷ್‍

Srinivas Rao BV

ನವದೆಹಲಿ: ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಲಾಕ್‌ಡೌನ್ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಜಾಗತಿಕ ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ ಆಶಿಷ್‍ ಜಾ ಅಭಿಪ್ರಾಯಪಟ್ಟಿದ್ದಾರೆ. 

ಆದಾಗ್ಯೂ ಲಾಕ್‌ಡೌನ್ ಅಂತಿಮ ಗುರಿಯಲ್ಲ. ಆದರೆ ಸರಿಯಾದ ದಿಕ್ಕಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್ ಆಲೋಚನೆ ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದ ಡಾ. ಜಾ, ಅವರು,’ಲಾಕ್‌ಡೌನ್ ಜಾರಿಯು ವೈರಸ್ ಹರಡುವಿಕೆ ತಡೆಯ ಪ್ರಯತ್ನವಾಗಿದೆ. ವೈರಸ್ ಹೊಸದಾಗಿದ್ದು, ಮಾನವ ಜನಾಂಗ ಇದನ್ನು ಮೊದಲು ನೋಡಿಲ್ಲ. ಅಂದರೆ ಒಟ್ಟು ಜನಸಂಖ್ಯೆಯ ನಮ್ಮೆಲ್ಲರಿಗೂ ಅಂದರಿಂದ ಅಪಾಯವಿದೆ. ಇದನ್ನು ತಡೆಯದೇ ಬಿಟ್ಟರೆ ವ್ಯಾಪಕವಾಗಿ ಹರಡುತ್ತದೆ.’ ಎಂದು ಅವರು ಹೇಳಿದ್ದಾರೆ.

SCROLL FOR NEXT