ದೇಶ

ಕೊರೋನಾ ಭೀತಿ: ಕುಟುಂಬ ಸದಸ್ಯರ ಪ್ರಯಾಣಕ್ಕೆ 180 ಸೀಟ್ ಗಳ ವಿಮಾನ ಬುಕ್ ಮಾಡಿದ ಉದ್ಯಮಿ

Srinivasamurthy VN

ಭೋಪಾಲ್: ಲಾಕ್ ಡೌನ್ ನಿಂದಾಗಿ ಭೋಪಾಲ್ ನಲ್ಲಿ ಸಿಲುಕಿದ್ದ ಕುಟುಂಬ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಉದ್ಯಮಿಯೋರ್ವ ಒಂದು ಇಡೀ ವಿಮಾನವನ್ನು ಬುಕ್ ಮಾಡಿದ್ದಾರೆ.

ಹೌದು.. ಭೋಪಾಲ್ ಮೂಲದ ಲಿಕ್ಕರ್ ಉದ್ಯಮಿಯೊಬ್ಬರು ಮೂರು ಕುಟುಂಬಗಳ ಪ್ರಯಾಣಕ್ಕಾಗಿ 180 ಸೀಟ್ ಗಳ ಎ320 ವಿಮಾನವನ್ನು ಬುಕ್ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ಪ್ರಸ್ತುತ ದೇಶಾದ್ಯಂತ ಆರ್ಭಟ ನಡೆಸುತ್ತಿರುವ ಕೊರೋನಾ ವೈರಸ್ ಹಿನ್ನಲೆಯಲ್ಲಿ ಉದ್ಯಮಿ  ಜನ ಸಮೂಹದಿಂದ ತಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಲು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಉದ್ಯಮಿಯ ಪುತ್ರಿ ಮತ್ತು ಆಕೆಯ ಇಬ್ಬರು ಮಕ್ಕಳು ಮತ್ತು ಅವರ ಕೆಲಸಗಾರರು ಲಾಕ್ ಡೌನ್ ನಿಂದಾಗಿ 2 ತಿಂಗಳಿಂದ ಭೋಪಾಲ್ ನಲ್ಲಿ ಸಿಲುಕಿದ್ದರು. ಕೇಂದ್ರ ಸರ್ಕಾರ ಖಾಸಗಿ ವಿಮಾನ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಉದ್ಯಮಿ ತಮ್ಮ ಕುಟುಂಬ  ಸದಸ್ಯರನ್ನು ದೆಹಲಿಗೆ ಕರೆಸಿಕೊಳ್ಳಲನ ವಿಮಾನ ಬುಕ್ ಮಾಡಿದ್ದಾರೆ. ಮೇ 25ರಂದು ವಿಮಾನ ಕುಟುಂಬ ಸದಸ್ಯರನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ವಿಮಾನದ ಕೆಲವೇ ಸಿಬ್ಬಂದಿ ಮತ್ತು ಅವರ ಕುಟುಂಬದ ನಾಲ್ಕು ಮಂದಿ ಪ್ರಯಾಣಿಕರು ಮಾತ್ರ ಇದ್ದರು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ವಿಮಾನ ನಿಲ್ದಾಣದ ಸಿಬ್ಬಂದಿ ಮೇ 25ರಂದು ವಿಮಾನ ಬಂದಿಳಿದಿದೆ. ವಿಮಾನದಲ್ಲಿ ಕೇವಲ 4 ಮಂದಿ ಪ್ರಯಾಣಿಕರು ಮಾತ್ರ ಇದ್ದರು. ಬಹಶಃ ಅವರೆಲ್ಲರೂ ಕುಟುಂಬ ಸದಸ್ಯರಿರಬೇಕು. ಕೊರೋನಾ ಭೀತಿಯಿಂದ ಕುಟುಂಬ ಸದಸ್ಯರಿಗಾಗಿ ಇಡೀ ವಿಮಾನ ಬುಕ್  ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿರುವಂತೆ ಭೋಪಾಲ್ ನಿಂದ ದೆಹಲಿಗೆ ವಿಮಾನ ಪ್ರಯಾಣಿಸಲು ಕನಿಷ್ಠ 20 ಲಕ್ಷ ರೂ ತಗುಲುತ್ತದೆ ಎಂದು ಹೇಳಿದ್ದಾರೆ.

SCROLL FOR NEXT