ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿಕೆಗಾಗಿ ನಾಸಾದಿಂದ 3 ಭಾರತೀಯ ಕಂಪನಿಗಳ ಆಯ್ಕೆ 
ದೇಶ

ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿಕೆಗಾಗಿ ನಾಸಾದಿಂದ 3 ಭಾರತೀಯ ಕಂಪನಿಗಳ ಆಯ್ಕೆ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ 3 ಭಾರತೀಯ ಕಂಪನಿಗಳು ಕೋವಿಡ್-19 ಸೋಂಕಿತರಿಗಾಗಿ ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿ ಮಾಡಿಕೊಡಲಿವೆ. 

ವಾಷಿಂಗ್ ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ 3 ಭಾರತೀಯ ಕಂಪನಿಗಳು ಕೋವಿಡ್-19 ಸೋಂಕಿತರಿಗಾಗಿ ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿ ಮಾಡಿಕೊಡಲಿವೆ. 

ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್, ಭಾರತ್ ಫೋರ್ಜ್ ಲಿಮಿಟೆಡ್, ಮೇಧಾ ಸರ್ವೋ ಡ್ರೈವ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳನ್ನು ಅಗ್ಗದ ದರದಲ್ಲಿ ವೆಂಟಿಲೇಟರ್ ತಯಾರಿಕೆಗಾಗಿ ನಾಸಾ ಆಯ್ಕೆ ಮಾಡಿದೆ. 

ತಯಾರಾಗಬೇಕಿರುವ ವೆಂಟಿಲೇಟರ್ ಗಳ ಮೂಲಮಾದರಿಯನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಂಜಿನಿಯರ್‌ಗಳು 37 ದಿನಗಳಲ್ಲಿ ತಯಾರಿಸಿದ್ದಾರೆ. ಇದಕ್ಕೆ ವೈಟಲ್ (Ventilator Intervention Technology Accessible Locally) ಎಂಬ ಹೆಸರು ನೀಡಲಾಗಿದ್ದು, ಈಗಾಗಲೇ ಸಪ್ಲೈ ಚೈನ್ ನಲ್ಲಿರುವ ಸಾಂಪ್ರದಾಯಿಕ ವೆಂಟಿಲೇಟರ್ ಗಳಿಗೆ ಬಳಕೆ ಮಾಡಬಹುದಾಗಿರುವ ಏಳನೇ ಒಂದರಷ್ಟು ಭಾಗಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗುತ್ತದೆ.

ಇದರಿಂದಾಗಿ ಸಾಂಪ್ರದಾಯಿಕ ವೆಂಟಿಲೇಟರ್ ಗಳನ್ನು ಅತ್ಯಂತ ತುರ್ತಾಗಿರುವ ಕೋವಿಡ್-19 ರೋಗಿಗಳಿಗೆ ಮಾತ್ರ ಬಳಕೆ ಮಾಡಲು ಅವಕಾಶ ಸಿಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ