ದೇಶ

ಶ್ರಮಿಕ್ ರೈಲುಗಳ ಹೆಸರಿನಲ್ಲಿ ಕೊರೊನಾ ಎಕ್ಸ್ ಪ್ರೆಸ್ಗಳನ್ನು ಓಡಿಸುತ್ತಿದೆ: ಮಮತಾ ಬ್ಯಾನರ್ಜಿ ಆಕ್ರೋಶ

Vishwanath S

ಕೊಲ್ಕತ್ತಾ: ರೈಲ್ವೆ ಇಲಾಖೆ ದೇಶಾದ್ಯಂತ ಶ್ರಮಿಕ್ ವಿಶೇಷ ರೈಲುಗಳ ಹೆಸರಿನಲ್ಲಿ ಕೊರೊನಾ ಎಕ್ಸ್ ಪ್ರೆಸ್ ಗಳನ್ನು ಓಡಿಸುತ್ತಿದೆ ಎಂದು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರಮಿಕ್ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರ ನಡುವೆ ದೈಹಿಕ ಅಂತರ  ಪಾಲಿಸುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಕಾನೂನು ಎಲ್ಲರಿರೂ ಸಮಾನ. ಆದರೆ, ರೈಲ್ವೆ ಇಲಾಖೆ ಶ್ರಮಕ್ ರೈಲಿನಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರಿಗೆ ಆಹಾರ, ಶುದ್ಧ ಕುಡಿಯುವ ನೀರು ಏಕೆ ಪೂರೈಸುತ್ತಿಲ್ಲ..? ಸಾಮಾಜಿಕ ಅಂತರವನ್ನು ಏಕೆ ಪಾಲಿಸುತ್ತಿಲ್ಲ...? ಎಂದು ಪ್ರಶ್ನಿಸಿದ್ದಾರೆ.

ರೈಲ್ವೆ ಇಲಾಖೆ ಶ್ರಮಿಕ್ ಎಕ್ಸ್ ಪ್ರೆಸ್ ಹೆಸರಿನಲ್ಲಿ ಕೊರೊನಾ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಕೊರೊನಾ ಸೂಕ್ಷ್ಮ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಬೇರೆ ಬೇರೆ ಪ್ರದೇಶಗಳಗೆ ಸಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಖಾಸಗಿ ವಲಯದಲ್ಲಿ ಕಾರ್ಮಿಕರೆಲ್ಲರೂ ಸುರಕ್ಷಿತವಾಗಿರುವಂತೆ ಸೂಕ್ತ  ನೋಡಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ  ಆಗ್ರಹಿಸಿದ್ದಾರೆ. ರಾಜ್ಯದಲ್ಲಿನ ಸೆಣಬು ಕಾರ್ಖಾನೆಗಳು, ಚಹ ತೋಟಗಳು ಶೇ 100ರಷ್ಟು ಕಾರ್ಮಿಕರು  ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಪಶ್ಚಿಮ ಬಂಗಾಳದಲ್ಲಿ ದೇವಾಲಯಗಳು, ಗುರುದ್ವಾರಗಳು, ಮಸೀದಿಗಳು, ಚರ್ಚ್ ಗಳ ಬಾಗಲುಗಳು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT