ದೇಶ

ಕೊರೋನಾ ವೈರಸ್: ಮಹಾರಾಷ್ಟ್ರ, ಉ.ಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಬಿಹಾರದಲ್ಲಿ ಲಾಕ್ ಡೌನ್ ವಿಸ್ತರಣೆ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯನ್ನು ಜೂನ್ 30ರವರೆಗೂ ವಿಸ್ತರಿಸಿದ ಬೆನ್ನಲ್ಲೇ ಮಹಾರಾಷ್ಟ್ರ, ಉ.ಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಸರ್ಕಾರಗಳೂ ಕೂಡ ಲಾಕ್ ಡೌನ್  ಅವಧಿ ವಿಸ್ತರಣೆ ಮಾಡಿವೆ.

ಮಹಾರಾಷ್ಟ್ರ ಸರ್ಕಾರ 'ಮಿಷನ್ ಬಿಗ್ಯಾನ್ ಎಗೈನ್' (ಕಾರ್ಯಾಚರಣೆ ಮತ್ತೆ ಆರಂಭವಾಗಿದೆ) ಎಂಬ ಶೀರ್ಷಿಕೆಯಡಿಯಲ್ಲಿ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಭಾರತದಲ್ಲಿ ಕೊರೋನಾ ವೈರಸ್ ದಾಳಿಗೆ ವ್ಯಾಪಕವಾಗಿ ತುತ್ತಾಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ  ಸಂಖ್ಯೆ 65,168ಕ್ಕೆ ಏರಿಕೆಯಾಗಿದ್ದು, 2,197 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಲಾಕ್ ಡೌನ್ ಅನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಿದೆ.

ಇನ್ನು ತೆಲಂಗಾಣ ಸರ್ಕಾರ ಕೂಡ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಲಾಕ್ ಡೌನ್ ಅನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಿದ್ದು, ಅಂತರ್ ರಾಜ್ಯ ರಸ್ತೆ ಸಾರಿಗೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದೆ. ಇತ್ತ ಕರ್ನಾಟಕ ಸರ್ಕಾರ ಕೂಡ ಇಂತಹುದೇ ಕ್ರಮಗಳನ್ನು ಕೈಗೊಂಡಿದ್ದು,  ರಾಜ್ಯದಲ್ಲಿ ಜೂನ್ 30ರವರೆಗೂ ಲಾಕ್ ಡೌನ್ ಮಾರ್ಗಸೂಚಿ ನಿಯಮಗಳನ್ನು ಮುಂದುವರೆಸಲಾಗಿದೆ. ಬಿಹಾರ ಸರ್ಕಾರ ಕೂಡ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದೆ.

ಅತ್ತ ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶ ಸರ್ಕಾರಗಳೂ ಜೂನ್ 8ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳು, ದೇಗುಲಗಳು, ಪ್ರಾರ್ಥನಾ ಮಂದಿರಗಳು. ಶಾಪಿಂಗ್ ಮಾಲ್ ಗಳು ಜೂನ್ 8ರಿಂದ ಆರಂಭಗೊಳ್ಳಲಿವೆ. 

SCROLL FOR NEXT