ದೇಶ

ಪುಲ್ವಾಮಾ ದಾಳಿ ನಂತರ ವದಂತಿ ಹಬ್ಬಿಸುತ್ತಿದ್ದವರ ಮುಖವಾಡ ಕಳಚಿ ಬಿದ್ದಿದೆ: ವಿರೋಧ ಪಕ್ಷ ಮೇಲೆ ಪ್ರಧಾನಿ ಮತ್ತೆ ಆರೋಪ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸತತ ಎರಡನೇ ದಿನವೂ ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಷಯ ಎತ್ತಿದ್ದಾರೆ.

ಇಂದು ಬಿಹಾರದ ಛಪ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವದಂತಿ ಹಬ್ಬಿಸುತ್ತಿರುವವರ ಮುಖವಾಡ ಕಳಚಿಬಿದ್ದಿದೆ ಎಂದಿದ್ದಾರೆ.

ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ರಾಜಕೀಯ ಮಾಡುವವರು ಜನರಲ್ಲಿ ಸಾಕಷ್ಟು ಗೊಂದಲಗಳನ್ನು, ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ. ಸೇನಾಪಡೆಯಲ್ಲಿ ಸೇವೆಯಲ್ಲಿರುವ ಈ ಮಣ್ಣಿನ ಯೋಧರ ಧೈರ್ಯ, ಸಾಹಸಗಳನ್ನು ಪ್ರಶ್ನೆ ಮಾಡುತ್ತಿರುವವರು ಇಂದು ನಿಮ್ಮ ಬಳಿ ಬಂದು ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

ಕೇವಲ ಎರಡು ಮೂರು ದಿನಗಳ ಹಿಂದೆ ನಮ್ಮ ನೆರೆ ದೇಶ ಪುಲ್ವಾಮಾ ದಾಳಿಯ ಸತ್ಯ ಒಪ್ಪಿಕೊಂಡಿತು. ದಾಳಿಯ ನಂತರ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದವರ ಮುಖವಾಡವನ್ನು ಈ ಸತ್ಯ ಬಹಿರಂಗಗೊಳಿಸಿದೆ. ನಮ್ಮ ಮಣ್ಣಿನ ಮಕ್ಕಳ ಧೈರ್ಯ, ಸಾಹಸವನ್ನು ಬಿಹಾರಿಗಳು ಸೇರಿದಂತೆ ಯಾರೂ ಪ್ರಶ್ನೆ ಮಾಡಿರಲಿಲ್ಲ. ಆದರೆ ಅಧಿಕಾರದ ರಾಜಕೀಯ ಮತ್ತು ಸ್ವಾರ್ಥ ಸಾಧಿಸುವವರು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದರು ಎಂದರು. ಇದೇ ರೀತಿಯ ಮಾತುಗಳನ್ನು ಪ್ರಧಾನಿ ನಿನ್ನೆ ಗುಜರಾತ್ ನಲ್ಲಿ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮದಲ್ಲಿ ಕೂಡ ಹೇಳಿದ್ದರು.

SCROLL FOR NEXT