ದೇಶ

ರಾಜ್ಯಸಭೆಯಲ್ಲಿ 100 ಸ್ಥಾನಗಳ ಗಡಿ ದಾಟಿದ ಎನ್ ಡಿಎ: ಕಡಿಮೆ ಸ್ಥಾನಕ್ಕೆ ಕುಸಿದ ಕಾಂಗ್ರೆಸ್ 

Nagaraja AB

ನವದೆಹಲಿ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ 9 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಸೋಮವಾರ ಮೇಲ್ಮನೆಗೆ ಆಯ್ಕೆಯಾಗುವುದರೊಂದಿಗೆ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟ ರಾಜ್ಯಸಭೆಯಲ್ಲಿ 100 ಸ್ಥಾನಗಳ ಗಡಿ ದಾಟಿದ್ದು, ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

 ಮತ್ತೊಂದೆಡೆ  242 ಸದಸ್ಯ ಬಲದ ಮೇಲ್ಮನೆಯಲ್ಲಿ  ಅನೇಕ ವರ್ಷಗಳಿಂದಲೂ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್, ಎರಡು ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ  ಕೇವಲ 38 ಸ್ಥಾನಗಳನ್ನು ಹೊಂದುವಂತಾಗಿದೆ. 

11 ರಾಜ್ಯಸಭಾ ಸ್ಥಾನಗಳಿಗೆ  ನಡೆದ ಚುನಾವಣೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಪುರಿ ಸೇರಿದಂತೆ 9 ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ  ಪಕ್ಷ 92 ಸದಸ್ಯರನ್ನು ಹೊಂದಿದಂತಾಗಿದೆ. ಮೂವರು ಅಭ್ಯರ್ಥಿಗಳು ಮರು ಆಯ್ಕೆಯಾಗಿದ್ದು, ಅದರ ಲಾಭವೂ ದೊರೆತಿದೆ. ಎನ್ ಡಿಎ ಅಂಗಪಕ್ಷ ಜೆಡಿಯು ಐದು ಸ್ಥಾನಗಳನ್ನು ಪಡೆದುಕೊಂಡಿದೆ.

ಎನ್ ಡಿಎ ಸಂಖ್ಯಾಬಲ ಇದೀಗ 104ಕ್ಕೆ ಏರಿಕೆಯಾಗಿದ್ದು, ನಾಲ್ವರು ನಾಮನಿರ್ದೇಶಿತ ಸದಸ್ಯರ ಬೆಂಬಲವನ್ನು ಕೂಡಾ ಪಡೆಯಬಹುದಾಗಿದೆ.242 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಸ್ಥಾನಗಳ ಅಗತ್ಯವಿದೆ.

SCROLL FOR NEXT