ದೇಶ

ವೇತನ ವಿಳಂಬ: ಮಹಾರಾಷ್ಟ್ರ ಬಸ್ ಕಂಡಕ್ಟರ್ ಆತ್ಮಹತ್ಯೆ

Nagaraja AB

ಮುಂಬೈ: ಕಳೆದ ಮೂರು ತಿಂಗಳುಗಳಿಂದ ಸರಿಯಾದ ಸಂಬಳ ದೊರೆಯದ ಕಾರಣ ನಿರಾಸೆಗೊಂಡಿದ್ದ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದ ಬಸ್ ಕಂಡಕ್ಟರ್ ಒಬ್ಬರು ಜಲ್ಗಾಂವ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಸಾವಿಗೆ ಉದ್ಧವ್ ಠಾಕ್ರೆ ಸರ್ಕಾರ ಕಾರಣ ಎಂದು ಮೃತ ಕಂಡಕ್ಟರ್ ಹೇಳಿರುವುದಾಗಿ ಆತನ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲ್ಗಾಂವ್ ಡಿಪೋದಲ್ಲಿ ನಿಯೋಜನೆಗೊಂಡಿದ್ದ ತನ್ನ ಮಗ, ಸಾಲ ಮಾಡಿಕೊಂಡಿದ್ದ, ಆದರೆ, ದೊರೆಯುತ್ತಿದ್ದ ಕಡಿಮೆ ಸಂಬಳದಿಂದ ಸಾಲ ತೀರಿಸಲಾಗಿದೆ ಮೃತಪಟ್ಟಿರುವುದಾಗಿ ಮೃತ ಬಸ್ ಕಂಡಕ್ಟರ್ ತಂದೆ ಅನಿಲ್ ಚೌದರಿ ಹೇಳಿದ್ದಾರೆ.

ಸಂಬಳ ಬಾಕಿ ಇರುವ ನೌಕರರಿಗೆ ಇಂದು ಒಂದು ತಿಂಗಳ ಸಂಬಳ ನೀಡಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಸಾರಿಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

ದೀಪಾವಳಿಗೂ ಮುನ್ನ ಎರಡು ತಿಂಗಳ ಸಂಬಳವನ್ನು ಸಾರಿಗೆ ನೌಕರರು ಪಡೆಯುತ್ತಿದ್ದಾರೆ. ಅವರು ನಿರಾಶರಾಗಬೇಕಾಗಿಲ್ಲ, ಆತ್ಮಹತ್ಯೆಯಂತಹ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆರ್ಥಿಕ ಸ್ಥಿತಿ ಈಗ ಕೆಟ್ಟದಾಗಿದೆ ಆದರೆ,  ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

SCROLL FOR NEXT