ದೇಶ

ಅರ್ನಾಬ್ ಆರೋಗ್ಯ, ಭದ್ರತೆ ವಿಚಾರವಾಗಿ ಮಹಾರಾಷ್ಟ್ರ ಗೃಹ ಸಚಿವರೊಂದಿಗೆ ರಾಜ್ಯಪಾಲ ಕೋಶಿಯಾರಿ ಮಾತುಕತೆ

Nagaraja AB

ಮುಂಬೈ: ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣದಲ್ಲಿ ಕಳೆದ ವಾರ ಬಂಧಿಸಲಾಗಿರುವ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಆರೋಗ್ಯ, ಭದ್ರತೆ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರೊದಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಾತುಕತೆ ನಡೆಸಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.

ಗೋಸ್ವಾಮಿ ತಮ್ಮ ಕುಟುಂಬ ಸದಸ್ಯರನ್ನು ನೋಡಲು ಹಾಗೂ ಅವರೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡುವಂತೆ ಕೋಶಿಯಾರಿ, ಗೃಹ ಸಚಿವರಿಗೆ ಸೂಚಿಸಿದ್ದಾರೆ. ಗೋಸ್ವಾಮಿ ಅವರನ್ನು ಬಂಧಿಸಿದ ರೀತಿಯ ಬಗ್ಗೆ ದೇಶಮುಖ್ ಅವರೊಂದಿಗೆ ರಾಜ್ಯಪಾಲರು ಕಳವಳ ವ್ಯಕ್ತಪಡಿಸಿರುವುದಾಗಿ ರಾಜ್ಯಪಾಲರ ಕಚೇರಿ ಇಂದು ಹೇಳಿಕೆಯಲ್ಲಿ ತಿಳಿಸಿದೆ.

ವಿನ್ಯಾಸಕರ ಅನ್ವಯ್ ನಾಯಕ್ ಮತ್ತು ಆತನ ತಾಯಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ನವೆಂಬರ್ 4 ರಂದು  ಅನಾರ್ಬ್ ಗೋಸ್ವಾಮಿ ಮತ್ತಿತಬ್ಬರನ್ನು ಅಲಿಬಾಗ್ ಪೊಲೀಸರು ಬಂಧಿಸಿದ್ದರು.

 ಮುಂಬೈಯಲ್ಲಿನ ನಿವಾಸದಲ್ಲಿ ಬಂಧಿಸಿದ ನಂತರ ಗೋಸ್ವಾಮಿಯನ್ನು ಅಲಿಬಾಗ್ ಚೀಪ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ನವೆಂಬರ್ 18ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದರು.

ಅಲಿಬಾಗ್ ಕಾರಾೃಗೃಹದ ಕೋವಿಡ್-19 ಸೆಂಟರ್ ಆಗಿ ಪರಿವರ್ತಿಸಲಾಗಿದ್ದ ಸ್ಥಳೀಯ ಶಾಲೆಯಲ್ಲಿ ಗೋಸ್ವಾಮಿಯನ್ನು ಇರಿಸಲಾಗಿತ್ತು. ಆದರೆ, ನ್ಯಾಯಾಂಗ ಬಂಧನ ಅವಧಿಯಲ್ಲಿ ಮೊಬೈಲ್ ಫೋನ್ ನಲ್ಲಿ ಮಾತನಾಡಿದದ್ದು ಕಂಡುಬಂದ ಹಿನ್ನೆಲೆಯಲ್ಲಿ ಭಾನುವಾರ ಟಲೋಜ ಜೈಲಿಗೆ ಗೋಸ್ವಾಮಿಯನ್ನು ಸ್ಥಳಾಂತರ ಮಾಡಲಾಗಿದೆ.

SCROLL FOR NEXT