ದೇಶ

ಬಿಹಾರ ಚುನಾವಣೆ: ಮಹಾಘಟಬಂಧನ್- ಎನ್ ಡಿಎ ನಡುವೆ ನೇರ ಹಣಾಹಣಿ; ಉಭಯ ಪಕ್ಷಗಳಿಂದಲೂ ಪ್ರಬಲ ಸ್ಪರ್ಧೆ

Srinivas Rao BV

ನವದೆಹಲಿ: ಕೊರೋನೋತ್ತರ ಮೊದಲ ಚುನಾವಣೆಯಾಗಿದ್ದ ಬಿಹಾರದ ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಗತಿಯಲ್ಲಿದ್ದು, ಆರಂಭಿಕ ಹಿನ್ನಡೆ ಕಾಯ್ದುಕೊಂಡಿದ್ದ ಎನ್ ಡಿಎ ಮೈತ್ರಿಕೂಟ ನಿಧಾನವಾಗಿ ಆರ್ ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಗೆ ಪ್ರಬಲ ಪೈಪೋಟಿ ನೀಡಲು ಪ್ರಾರಂಭಿಸಿದೆ. 

ಆರಂಭದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ರ ಮಹಾಘಟಬಂಧನ್ ಮುನ್ನಡೆ ಕಾಯ್ದುಕೊಂಡಿದ್ದರು. ಒಟ್ಟು 243 ಕ್ಷೇತ್ರಗಳ ಪೈಕಿ ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾಘಟ್  ಬಂಧನ್ 84 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ನಿತೀಶ್ ನೇತೃತ್ವದ ಎನ್ ಡಿಎ ಮೈತ್ರಿಕೂಟ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. 

ಆದರೆ ಈಗ ಟ್ರೆಂಡ್ ಬದಲಾಗುತ್ತಿದ್ದು ಮುನ್ನಡೆಯಲ್ಲಿ ಎನ್ ಡಿಎ-ಮಹಾಘಟಬಂಧನ್ ಗೆ ಕೇವಲ 6 ಸ್ಥಾನಗಳ ವ್ಯತ್ಯಾಸವಿದ್ದು, ಎನ್ ಡಿಎ ಮಹಾಘಟಬಂಧನ್ ಗೆ ಪ್ರಬಲ ಪೈಪೋಟಿ ನೀಡಲು ಪ್ರಾರಂಭಿಸಿದೆ. 

243 ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ 109 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಆರ್ ಜೆಡಿ+ ನೇತೃತ್ವದ ಮಹಾಘಟಬಂಧನ್ 115 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎನ್ ಡಿಎ ಮಾಜಿ ಮಿತ್ರ ಪಕ್ಷ ಎಲ್ ಜೆಪಿ 09 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರರು 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

SCROLL FOR NEXT