ತೇಜಸ್ವಿ ಯಾದವ್ 
ದೇಶ

ಮಹಾಘಟಬಂಧನ್ ಶಾಸಕಾಂಗ ಪಕ್ಷದ ನಾಯಕರಾಗಿ ತೇಜಶ್ವಿ ಆಯ್ಕೆ, ವಂಚನೆಯಿಂದ ಎನ್ ಡಿಎ ಗೆಲುವು ಎಂದ ಲಾಲು ಪುತ್ರ

ಮಹಾಘಟಬಂಧನ್ ಶಾಸಕಾಂಗ ಪಕ್ಷದ ನಾಯಕರಾಗಿ ಆರ್ ಜೆಡಿಯ ತೇಜಶ್ವಿ ಯಾದವ್ ಅವರು ಗುರುವಾರ ಆಯ್ಕೆಯಾಗಿದ್ದಾರೆ.

ಪಾಟ್ನಾ: ಮಹಾಘಟಬಂಧನ್ ಶಾಸಕಾಂಗ ಪಕ್ಷದ ನಾಯಕರಾಗಿ ಆರ್ ಜೆಡಿಯ ತೇಜಶ್ವಿ ಯಾದವ್ ಅವರು ಗುರುವಾರ ಆಯ್ಕೆಯಾಗಿದ್ದಾರೆ.

ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಶ್ವಿ ಯಾದವ್ ಅವರು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ರಾಜ್ಯದ ಜನರ ಬೆಂಬಲ ಗಳಿಸಿದೆ ಆದರೆ, ಎನ್ ಡಿಎ ಹಣ, ತೋಳ್ಬಲ ಮತ್ತು ವಂಚನೆಯ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿದರು.

ಇದೇ ವೇಳೆ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಚುನಾವಣೆಯಲ್ಲಿ ಜೆಡಿಯು ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದು, ಒಂದು ವೇಳೆ ಅವರಿಗೆ ಆತ್ಮಸಾಕ್ಷಿ ಇದ್ದರೆ, ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕು ಎಂದರು.

ಎನ್ ಡಿಎ ಮಹಾಘಟಬಂಧನ್ ಕ್ಕಿಂತ ಕೇವಲ 12, 270 ಹೆಚ್ಚಿನ ಮತ ಪಡೆದಿದೆ. ಇಷ್ಟು ಕಡಿಮೆ ಮತಗಳಲ್ಲಿ 15 ಹೆಚ್ಚಿನ ಸ್ಥಾನಗಳನ್ನು ಗೆಲಲ್ಲು ಹೇಗೆ ಸಾಧ್ಯ? ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆರ್ ಜೆಡಿ ನಾಯಕ, ಕೊನೆಯಲ್ಲಿ ಮಾಡಲಾದ ಎಲ್ಲಾ ಕ್ಷೇತ್ರಗಳ ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಒತ್ತಾಯಿಸಿದರು.

ಕಡಿಮೆ ಅಂತರದಲ್ಲಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ 900ಕ್ಕೂ ಹೆಚ್ಚು ಅಂಚೆ ಮತಗಳನ್ನು ಅಮಾನ್ಯ ಮಾಡಲಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

ತಮಿಳುನಾಡು ಸಿಎಂ ವಿಜಯ್-ಪ್ರಧಾನಿ ಮೋದಿ ಭೇಟಿ: ಎರಡು ದೊಡ್ಡ ಬೇಡಿಕೆ; ಇಲ್ಲಿದೆ ವಿವರ..

SCROLL FOR NEXT