ದೇಶ

ಎಚ್ಎಎಂ ಶಾಸಕಾಂಗ ಪಕ್ಷದ ನಾಯಕರಾಗಿ ಮಾಂಝಿ ಆಯ್ಕೆ, ಸಚಿವ ಸ್ಥಾನ ಒಪ್ಪಿಕೊಳ್ಳಲ್ಲ ಎಂದ ಮಾಜಿ ಸಿಎಂ

Lingaraj Badiger

ಪಾಟ್ನಾ: ಹಿಂದೂಸ್ತಾನಿ ಆವಾಮ್ ಮೋರ್ಚಾ(ಎಚ್ಎಎಂ)ದ ಶಾಸಕಾಂಗ ಪಕ್ಷದ ನಾಯಕಾರಿ ಬಿಹಾರ ಮಾಜಿ ಮುಖ್ಯಮಂತ್ರಿ  ಜೀತನ್ ರಾಮ್ ಮಾಂಝಿ ಅವರು ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ನಡೆದ ಬಿಹಾರ ಚುನಾವಣೆಯಲ್ಲಿ ಹೊಸದಾಗಿ ವಿಧಾನಸಭೆ ಆಯ್ಕೆಯಾದ ಎಚ್ಎಎಂನ ನಾಲ್ವರು ಶಾಸಕರು ಇಂದು ಮಾಂಝಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಮಾಜಿ ಸಿಎಂ ಅನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಂಝಿ, ಕಾಂಗ್ರೆಸ್ ನ ಹೊಸದಾಗಿ ಆಯ್ಕೆಯಾದ ಶಾಸಕರು ರಾಜ್ಯದ ಪ್ರಗತಿಗಾಗಿ ಎನ್ ಡಿಎ ಸೇರಬೇಕು ಎಂದು ಸಲಹೆ ನೀಡಿದರು.

ನಿತೀಶ್ ಕುಮಾರ್ ಅವರ ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್ ಯೋಜನೆಗಿಂತ ಹೆಚ್ಚು ಭಿನ್ನವಾಗಿಲ್ಲ. ಹೀಗಾಗಿ, ನೀವು ನಮ್ಮೊಂದಿಗೆ ಎನ್‌ಡಿಎಗೆ ಸೇರಿಕೊಳ್ಳಬಹುದು ಮತ್ತು ರಾಜ್ಯದ ಅಭಿವೃದ್ಧಿಗೆ ಸಹಕರಿಸಬಹುದು "ಎಂದು ಮಾಂಝಿ ಹೇಳಿದರು.

ನಾನು ಈಗಾಗಲೇ ಮುಖ್ಯಮಂತ್ರಿಯಾಗಿದ್ದು, ಈಗ ನಿತೀಶ್ ಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ ನಾನು ಸಚಿವನಾಗುವುದಿಲ್ಲ ಎಂದು ಎಚ್‌ಎಎಂ ನಾಯಕ ಹೇಳಿದ್ದಾರೆ.

ಜೆಡಿಯುನ 122 ಸ್ಥಾನಗಳ ಕೋಟಾದಿಂದ ಏಳು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಮಾಂಝಿ ಅವರ ಪಕ್ಷ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

SCROLL FOR NEXT