ಕೇದಾರನಾಥ ದೇವಾಲಯ 
ದೇಶ

ಚಳಿಗಾಲ ಹಿನ್ನೆಲೆ: ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ

ಚಳಿಗಾಲ ಹಿನ್ನೆಲೆಯಲ್ಲಿ ಹಿಮಪಾತದ ಕಾರಣ ಹಿಮಾಲಯ ತಪ್ಪಲಿನಲ್ಲಿರುವ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗಿದೆ.

ಗೋಪೇಶ್ವರ್: ಚಳಿಗಾಲ ಹಿನ್ನೆಲೆಯಲ್ಲಿ ಹಿಮಪಾತದ ಕಾರಣ ಹಿಮಾಲಯ ತಪ್ಪಲಿನಲ್ಲಿರುವ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗಿದೆ.

11 ಜ್ಯೋತಿರ್ಲಿಂಗಗಳುಳ್ಳ ಶಿವನ ದೇವಾಲಯವನ್ನು ಸೋಮವಾರ ಬೆಳಗ್ಗೆ 8.30 ಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಾಲಯದ ಗೇಟ್ ಗಳನ್ನು ಮುಚ್ಚಲಾಯಿತು. 

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. 

ಹಿಮಾಲಯದ ದೇವಸ್ಥಾನಗಳಾದ ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಚಳಿಗಾಲದಲ್ಲಿ ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುತ್ತದೆ.  ಹೀಗಾಗಿ, ದೇವಾಲಯ ಹಿಮಾವೃತವಾಗಲಿದೆ. ಅಲ್ಲದೆ, ಅಲ್ಲಿಗೆ ತೆರಳುವುದು ಕೂಡ ಅಸಾಧ್ಯ. ಏಪ್ರಿಲ್​-ಮೇ ತಿಂಗಳ ವೇಳೆಗೆ ಮತ್ತೆ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT