ದೇಶ

ತಪ್ಪಿದ ಭಯೋತ್ಪಾದಕ ದಾಳಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಬ್ಬರು ಜೆಇಎಂ ಉಗ್ರರ ಬಂಧನ

Manjula VN

ಮುಂಬೈ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಳಿ ನಡೆಸಲು ಸಜ್ಜಾಗಿದ್ದ ಇಬ್ಬರು ಜೈಷ್-ಇ-ಮೊಹಮ್ಮದ್ ಉಗ್ರ ಸಂಟನೆಯ ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು, ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಬಂಧಿತ ಇಬ್ಬರು ಉಗ್ರರನ್ನು ಅಬ್ದುಲ್ ಲತೀಫ್ (22) ಹಾಗೂ ಮೊಹಮ್ಮದ್ ಅಶ್ರಫ್ ಖತಾನಾ (20) ಎಂದು ಗುರ್ತಿಸಲಾಗಿದೆ. 

ಇಬ್ಬರು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾಗಿದ್ದು, ಪಾಕಿಸ್ತಾದನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆಂದು ಹೇಳಲಾಗುತ್ತಿದೆ. 

ಕಳೆದ ರಾತ್ರಿ 10.15ರ ಸುಮಾರಿದೆ ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರ ಬಳಿಯಿದ್ದ ಅರೆ-ಸ್ವಯಂಚಾಲಿತ ಪಿಸ್ತೂಲುಗಳು ಮತ್ತು 10 ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದ ಓರ್ವ ಉಗ್ರನನ್ನು ಪೊಲೀಸರು ಬಂಧಿಸಿದ್ದರು. 

SCROLL FOR NEXT