ಹೆಚ್ಚಿನ ಪ್ರಮಾಣದಲ್ಲಿ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಸೂಕ್ತವಲ್ಲ: ಐಸಿಎಂಆರ್
ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿರದ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರೆಪಿ ಸೂಕ್ತವಲ್ಲ ಎಂದು ಐಸಿಎಂ ಆರ್ ಸಲಹೆ ನೀಡಿದೆ.
ನವದೆಹಲಿ: ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿರದ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರೆಪಿ ಸೂಕ್ತವಲ್ಲ ಎಂದು ಐಸಿಎಂ ಆರ್ ಸಲಹೆ ನೀಡಿದೆ.
ಪ್ಲಾಸ್ಮಾ ಥೆರೆಪಿಯೆಡೆಗೆ ಎಸ್ಒಪಿಯನ್ನು ಬಿಡುಗಡೆ ಮಾಡಿರುವ ಐಸಿಎಂಆರ್ ಈ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಮಾ ಥೆರೆಪಿ ಮೊರೆ ಹೋಗುವುದು ಬೇಡ ಎಂದು ಹೇಳಿದೆ.
ಕನ್ವೆಲೆಸೆಂಟ್ ಪ್ಲಾಸ್ಮಾ ಕುರಿತಂತೆ ದೇಶದ 39 ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಟ್ರಯಲ್ ಗಳನ್ನು ಐಸಿಎಂ ಆರ್ ನಡೆಸಿದ್ದು, ಸಿಪಿಟಿಯಿಂದಾಗಿ ಕೋವಿಡ್-19 ಮರಣ ಪ್ರಮಾಣ ಸುಧಾರಣೆ ಕಾಣದೇ ಇರುವುದನ್ನು ಗಮನಿಸಿದ್ದು ಈ ಆದೇಶ ಹೊರಡಿಸಿದೆ.
ಇದೇ ಮಾದರಿಯ ಅಧ್ಯಯನಗಳು ಚೀನಾ ಹಾಗೂ ನೆದರ್ಲ್ಯಾಂಡ್ ಗಳಲ್ಲಿ ನಡೆದಿದ್ದು, ಮಹತ್ವದ ಸಂಗತಿಗಳು ಕಂಡುಬಂದಿಲ್ಲ ಆದ್ದರಿಂದ ಸಿಪಿಟಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದು ಸೂಕ್ತವಲ್ಲ ಎಂದು ಐಸಿಎಂಆರ್ ಹೇಳಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.