ದೇಶ

ಕೇಂದ್ರದಿಂದ 4 ರಾಜ್ಯಗಳಿಗೆ ಕೋವಿಡ್ ಕ್ರ್ಯಾಕ್ ಟೀಮ್ 

Srinivas Rao BV

ನವದೆಹಲಿ: ಅತಿ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಕೋವಿಡ್ ಕ್ರ್ಯಾಕ್ ಟೀಮ್ ನ್ನು ಕಳಿಸಿದೆ. 

ಹರ್ಯಾಣ, ರಾಜಸ್ಥಾನ, ಗುಜರಾತ್, ಮಣಿಪುರದ ಜಿಲ್ಲೆಗಳಲ್ಲಿ ಈ ಕ್ರ್ಯಾಕ್ ಟೀಮ್ ಕಾರ್ಯನಿರ್ವಹಿಸಲಿದ್ದು, ಕೋವಿಡ್-19 ನಿಯಂತ್ರಣ, ಪರೀಕ್ಷೆ, ಹಾಗೂ ಪರಿಣಾಮಕಾರಿ ಕ್ಲಿನಿಕಲ್ ಮ್ಯಾನೇಜ್ಮೆಂಟ್ ನಲ್ಲಿ ರಾಜ್ಯದ ತಂಡಕ್ಕೆ ಸಹಕರಿಸಲಿವೆ.

ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಏಮ್ಸ್ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ ಮೂವರು ಸದಸ್ಯರನ್ನೊಳಗೊಂಡ ತಂಡವನ್ನು ಮುನ್ನಡೆಸಲಿದ್ದು, ಹರ್ಯಾಣದ ಭಾಗಗಳಲ್ಲಿ ಗಮನ ಹರಿಸಲಿದ್ದಾರೆ. 

ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪೌಲ್ ನೇತೃತ್ವದ ತಂಡ ರಾಜಸ್ಥಾನದತ್ತ ಗಮನ ಹರಿಸಲಿದ್ದರೆ, ಎನ್ ಸಿ ಡಿಸಿಯ ನಿರ್ದೇಶಕ ಡಾ.ಎಸ್ ಕೆ ಸಿಂಗ್ ನೇತೃತ್ವದ ತಂಡ ಗುಜರಾತ್ ನಲ್ಲಿ ಸಹಕರಿಸಲಿದೆ. ಡಿಹೆಚ್ ಜಿಎಸ್ ನ ಹೆಚ್ಚುವರಿ ಡಿಡಿಜಿ ಡಾ. ಎಲ್ ಸ್ವಸ್ತಿಚರಣ್ ಮನಿಪುರ ತಂಡವನ್ನು ಮುನ್ನಡೆಸಲಿದ್ದಾರೆ.

SCROLL FOR NEXT