ದೇಶ

ಆರೋಗ್ಯ ಸೇವೆ ಕಾರ್ಯಕರ್ತರು, 65 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ನೀಡಿಕೆಯಲ್ಲಿ ಆದ್ಯತೆ: ಸಚಿವ ಹರ್ಷವರ್ಧನ್

Srinivas Rao BV

ನವದೆಹಲಿ: ಕೋವಿಡ್-19 ಲಸಿಕೆ ಲಭ್ಯವಾದಾಗ ಆದ್ಯತೆಯ ಆಧಾರದಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. 

ಎಫ್ಐಸಿಸಿಐ ಎಫ್ಎಲ್ಒಯಿಂದ ಆಯೋಜನೆಗೊಂಡ ವೆಬಿನಾರ್ ನಲ್ಲಿ ಮಾತನಾಡಿರುವ ಡಾ. ಹರ್ಷವರ್ಧನ್, ಮುಂದಿನ ಕೆಲವು ತಿಂಗಳುಗಳಲ್ಲಿ ಕೋವಿಡ್-19 ಲಸಿಕೆ ಲಭ್ಯವಾಗಲಿದೆ. ಜುಲೈ- ಆಗಸ್ಟ್ ನಲ್ಲಿ 400-500 ಮಿಲಿಯನ್ ಲಸಿಕೆಗಳು 25-30 ಕೋಟಿ ಜನರಿಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆದ್ಯತೆಯ ಆಧಾರದಲ್ಲಿ ಕೋವಿಡ್-19 ಲಸಿಕೆಯನ್ನು ಹಂಚುವುದು ಸ್ವಾಭಾವಿಕ. ಕೊರೋನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 65 ವಯಸ್ಸಿನವರಿಗೆ ಲಸಿಕೆಗಳನ್ನು ಮೊದಲು ವಿತರಿಸಲಾಗುವುದು ಆ ನಂತರ 50-65 ವಯಸ್ಸಿನವರನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

50 ವರ್ಷ ವಯಸ್ಸಿಗಿಂತ ಕಡಿಮೆ ಇದ್ದು, ಈಗಾಗಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಬಗ್ಗೆ ತಜ್ಞರು ನಿರ್ಧರಿಸಲಿದ್ದಾರೆ, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸ್ಪಷ್ಟ ಯೋಜನೆ ರೂಪಿಸಲಾಗಿರುವುದನ್ನು ಹರ್ಷವರ್ಧನ್ ತಿಳಿಸಿದ್ದಾರೆ.

SCROLL FOR NEXT