ಲಾಲ್ ಬಹದ್ದೂರು ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡೆಮಿ 
ದೇಶ

ಮಸ್ಸೂರಿ: ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿ ನಿರತ 33 ಐಎಎಸ್ ಅಧಿಕಾರಿಗಳಿಗೆ ಕೋವಿಡ್-19 ಪಾಸಿಟಿವ್

ಐಎಎಸ್ ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರು ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿನ ತರಬೇತಿ ನಿರತ 33 ನಾಗರಿಕ ಸೇವಾ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಡೆಹ್ರಾಡೂನ್:  ಐಎಎಸ್ ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರು ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿನ ತರಬೇತಿ ನಿರತ 33 ನಾಗರಿಕ ಸೇವಾ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಲಾಲ್ ಬಹದ್ದೂರು ಶಾಸ್ತ್ರಿ ರಾಷ್ಟ್ರೀಯ ಆಡಳಿತ ಆಕಾಡೆಮಿ, ಒಟ್ಟಾರೇ 428 ಅಧಿಕಾರಿಗಳು ಕ್ಯಾಂಪಸ್ ನಲ್ಲಿ  ತರಬೇತಿ ಪಡೆಯುತ್ತಿದ್ದು, ಈ ಪೈಕಿ 33 ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸರ್ಕಾರದ ಸೂಚನೆ ಅನುಸಾರ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದೆ.

ಸೂಕ್ತ ರಕ್ಷಣೆಯೊಂದಿಗೆ ಹಾಸ್ಟೆಲ್ ಸಿಬ್ಬಂದಿ ತರಬೇತಿ ನಿರತ ಅಧಿಕಾರಿಗಳಿಗೆ ಆಹಾರ ಮತ್ತಿತರ ಅವಶ್ಯತೆಗಳನ್ನು ಪೂರೈಸುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಲಾಗಿದೆ.

ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಡೆಹ್ರಾಡೂನ್ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಅಕಾಡೆಮಿ ನಿರ್ದೇಶಕ ಸಂಜಯ್ ಚೋಪ್ರಾ ತಿಳಿಸಿದ್ದಾರೆ.

ನವೆಂಬರ್ 30ರವರೆಗೆ ಎಲ್ಲಾ ತರಗತಿಗಳೂ ಆನ್ ಲೈನ್ ನಲ್ಲಿ ನಡೆಯಲಿವೆ. ಅವಶ್ಯಕತೆಯೇತರ ಇಲಾಖೆಗಳನ್ನು ಮುಚ್ಚಲಾಗಿದ್ದು, ಇಡೀ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದು BMTC ಕಂಡಕ್ಟರ್ ಅಟ್ಟಹಾಸ; Video ವೈರಲ್ ಬೆನ್ನಲ್ಲೇ ನಿರ್ವಾಹಕ ಅಮಾನತು!

ಮಂಡ್ಯ: ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದ ಸಾವು; ಬರ್ತ್‌ಡೇ ಪಾರ್ಟಿಗೆ ಕರೆದು ರೇಪ್‌ಗೆ ಯತ್ನಿಸಿ, ಕೊಲೆ ಆರೋಪ!

ರಾಜ್ಯದ ರೈತರಿಗೆ ತಕ್ಷಣ 10 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

ಸರ್ಕಾರಿ ಸ್ವಾಮ್ಯದ LIC ಸಂಸ್ಥೆಯಲ್ಲಿ ಶೇ.6.5 ರಷ್ಟು ಪಾಲು ಮಾರಾಟ; $3.3 ಬಿಲಿಯನ್ ಸಂಗ್ರಹ ಗುರಿ; ಪ್ರತಿ ಷೇರಿನ ಬೆಲೆ ಎಷ್ಟು ಗೊತ್ತೆ?