ದೇಶ

ಜಮ್ಮು-ಕಾಶ್ಮೀರದಲ್ಲಿ ದಾಳಿಗೆ ಜೆಇಎಂ ಯತ್ನ: ಪ್ರಮುಖ ರಾಷ್ಟ್ರಗಳ ರಾಯಭಾರಿಗೆ ವಿದೇಶಾಂಗ ಕಾರ್ಯದರ್ಶಿಗಳ ಮಾಹಿತಿ

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರದ ನಾಗ್ರೋಟಾದಲ್ಲಿ ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ದಾಳಿಯ ಯತ್ನವನ್ನು ಭಾರತ ವಿಫಲಗೊಳಿಸಿದ್ದು, ಈ ಬಗ್ಗೆ ರಷ್ಯಾ, ಅಮೆರಿಕ, ಫ್ರಾನ್ಸ್, ಜಪಾನ್ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ವಿವರಿಸಲಾಗಿದೆ. 

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ, ವಿದೇಶಿ ರಾಯಭಾರಿಗಳಿಗೆ ವಿವರಣೆ ನೀಡಿದ್ದು, ಸಂಪೂರ್ಣ ಮಾಹಿತಿ ಡಾಕೆಟ್ ಗಳನ್ನು ನೀಡಿ ಘಟನೆಯನ್ನು ವಿವರಿಸಿದ್ದಾರೆ. ಭಯೋತ್ಪಾದಕರಿಂದ ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳು ಪಾಕಿಸ್ತಾನದ ಕೈವಾಡವನ್ನು ಸ್ಪಷ್ಟವಾಗಿರುವುದನ್ನು ಪ್ರಮುಖ ರಾಷ್ಟ್ರಗಳ ನಾಯಕರಿಗೆ ವಿವರಿಸಲಾಗಿದೆ. 

ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಕದಡುವುದು ಹಾಗೂ ಚುನಾವಣೆಗಳನ್ನು ಹಾಳುಮಾಡುವುದಕ್ಕೆ ಪಾಕಿಸ್ತಾನದ ಯತ್ನದ ಬಗ್ಗೆ ಭಾರತದ ಆತಂಕಕ್ಕೆ ಈ ಪ್ರಮುಖ ರಾಷ್ಟ್ರಗಳು ಸೂಕ್ಷ್ಮತೆಯಿಂದ ಸ್ಪಂದಿಸಿವೆ.

SCROLL FOR NEXT