ದೇಶ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: ರಾಜ್ಯದ ಜನತೆಗೆ ಆರೋಗ್ಯ ಯೋಜನೆ ಘೋಷಿಸಿದ ದೀದಿ

Lingaraj Badiger

ಕೋಲ್ಕತಾ: 2021 ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಬಾಕಿ ಇದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ "ಸ್ವಾಸ್ಥಿ ಸಾತಿ" ಆರೋಗ್ಯ ಯೋಜನೆಯನ್ನು ಘೋಷಿಸಿದ್ದು, ರಾಜ್ಯದ ಎಲ್ಲರೂ ಈ ಯೋಜನೆಗೆ ಒಳಪಡಲಿದ್ದಾರೆ.

ಈ ಯೋಜನೆ ಡಿಸೆಂಬರ್ 1, 2020ರಿಂದ ಜಾರಿಗೆ ಬರಲಿದ್ದು, ಧರ್ಮ, ಜಾತಿ ಮತ್ತು ಮತ ಅಥವಾ ವೃತ್ತಿಯನ್ನು ಲೆಕ್ಕಿಸದೆ ರಾಜ್ಯದ ಎಲ್ಲ ಜನರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಈ ಮೊದಲು, ನಾವು ರಾಜ್ಯದ ಕನಿಷ್ಠ 7.5 ಕೋಟಿ ಜನರನ್ನು 'ಸ್ವಾಸ್ಥಿ ಸಾತಿ' ಅಡಿಯಲ್ಲಿ ಸೇರಿಸಲು ನಿರ್ಧರಿಸಿದ್ದೇವೆ. ಆದರೆ ಈಗ ಪಶ್ಚಿಮ ಬಂಗಾಳದ ಪ್ರತಿ ಕುಟುಂಬ, ಪ್ರತಿಯೊಬ್ಬ ವ್ಯಕ್ತಿ, ಅದು ಮಗು ಅಥವಾ ವೃದ್ಧ ಅಥವಾ ಮಹಿಳೆ ಆಗಿರಲಿ, ಅವರ ಧರ್ಮ, ಜಾತಿ, ವೃತ್ತಿಯನ್ನು ಲೆಕ್ಕಿಸದೆ ಎಲ್ಲರೂ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ" ಎಂದು ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಯೋಜನೆಯ ಲಾಭ ಪಡೆಯಲು ಪ್ರತಿ ಕುಟುಂಬಕ್ಕೂ ಒಂದು ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

SCROLL FOR NEXT