ದೇಶ

ಮಿಗ್ 29 ತರಬೇತಿ ಯುದ್ಧ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ, ಮತ್ತೋರ್ವ ಪೈಲಟ್ ನಾಪತ್ತೆ

Srinivasamurthy VN

ನವದೆಹಲಿ: ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಈ ಘಟನೆಯಲ್ಲಿ ಓರ್ವ ಪೈಲಟ್ ನನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದಾರೆ.

ಗೋವಾ ಬಂದರಿವನಲ್ಲಿರುವ ಐಎನ್ಎಸ್ ವಿಕ್ರಾಮಾಧಿತ್ಯ ನೌಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ನಿನ್ನೆ ಸಂಜೆ ಅರೇಬಿಯನ್ ಸುಮುದ್ರದಲ್ಲಿ ಪತನವಾಗಿದ್ದು, ಘಟನೆಯಲ್ಲಿ ಓರ್ವ ಪೈಲಟ್ ನನ್ನು ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ.  ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಪೈಲಟ್ ಗಾಗಿ ಕಾರ್ಯಾಚರಣೆ ಭರದಿಂದ ಸಾಗಿದೆ. ಅಂತೆಯೇ ವಿಮಾನ ಪತನಕ್ಕೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

ರಕ್ಷಣಾ ಸಚಿವಾಲಯ ಪ್ರಸ್ತುತ 40 ಮಿಗ್ -29 ಕೆ ಯುದ್ಧ ವಿಮಾನಗಳನ್ನು ಹೊಂದಿದೆ. ಈ ವರ್ಷ ಮೂರನೇ ಮಿಗ್ -29 ಕೆ ವಿಮಾನ ಅಪಘಾತ ಇದಾಗಿದೆ.

SCROLL FOR NEXT