ದೇಶ

ಗಲ್ವಾನ್ ಹುತಾತ್ಮ ಯೋಧರಿಗಾಗಿ ಹೊಸ ಯುದ್ಧ ಸ್ಮಾರಕ ನಿರ್ಮಾಣ 

Srinivas Rao BV

ಲಡಾಖ್: ಗಲ್ವಾನ್ ನಲ್ಲಿ ಚೀನಾ ಗಡಿ ಅತಿಕ್ರಮಣವನ್ನು ತಡೆಯುವ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಯೋಧರ ಸ್ಮರಣಾರ್ಥ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. 

ಡರ್ಬುಕ್-ಷ್ಯೋಕ್-ದೌಲತ್ ಬೇಗ್ ಓಲ್ಡೀ, ಲಡಾಖ್ ನ ಕೆಎಂ-120 ಪೋಸ್ಟ್ ನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಅಲ್ಲಿ 20 ಹುತಾತ್ಮ ಯೋಧರ ಹೆಸರನ್ನು ಘಟನೆ ಸಹಿತ ಬರೆಯಲಾಗಿದೆ. 

"ಜೂ.15, 2020 ರಂದು ಗಲ್ವಾನ್ ಕಣಿವೆಯಲ್ಲಿ ಕರ್ನಲ್ ಸಂತೋಷ್ ಬಾಬು, ಕಮಾಂಡಿಂಗ್ ಅಧಿಕಾರಿ, 16 ಬಿಹಾರ್ ಅವರು 16 ಬಿಹಾರ್ ಕ್ವಿಕ್ ರಿಯಾಕ್ಷನ್ ಫೋರ್ಸ್ ನ್ನು ಮುನ್ನಡೆಸಿ ಪಾಯಿಂಟ್ 14 ರಿಂದ ಮುಂದೆ ಬರುವ ಪಿಎಲ್ಎಯ ಯತ್ನವನ್ನು ತಡೆಗಟ್ಟಿದ್ದರು. ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಪಿಪಿ 14 ರ ಬಳಿ ಪಿಎಲ್ಎ ಸೈನಿಕರು ಮುಂದೆ ಬಂದಾಗ ಘರ್ಷಣೆ ಉಂಟಾಗಿದ್ದು, ಪಿಎಲ್ಎ ಯತ್ನವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ಯೋಧರು ಧೈರ್ಯದಿಂದ ಹೋರಾಡಿದ್ದರು. ಈ ಕಾರ್ಯಾಚರಣೆಯಲ್ಲಿ ಸಾವು-ನೋವುಗಳು ಸಂಭವಿಸಿ, ಯೋಧರು ಹುತಾತ್ಮರಾಗಿದ್ದಾರೆಂದು" ಸ್ಮಾರಕದ ಮೇಲೆ ಘಟನಾ ವಿವರಗಳನ್ನು ನೀಡಲಾಗಿದೆ.  

SCROLL FOR NEXT