ದೇಶ

ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಹೊಸ ಯೋಜನೆ: ಜಾವಡೇಕರ್‌

Srinivasamurthy VN

ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಾಣಿ ಸಂಗ್ರಹಾಲಯಗಳ ಸುಧಾರಣೆ ಮತ್ತು ಹೊಸದನ್ನು ನಿರ್ಮಿಸಲು ಶೀಘ್ರದಲ್ಲೇ ಹೊಸ ಯೋಜನೆ ಜಾರಿಗೊಳಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್‌ ಜಾವಡೇಕರ್‌ ಸೋಮವಾರ ಹೇಳಿದ್ದಾರೆ.

ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಣಿ ಮಿತ್ರ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ ನೀಡುವ ಜನರ ಒಟ್ಟಾರೆ ಅನುಭವವನ್ನು ವೃದ್ಧಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗುವುದು ಎಂದರು.

ಒಂದು ತಿಂಗಳಲ್ಲಿ ಈ ಯೋಜನೆಯ ನೀಲಿನಕ್ಷೆ ಆರಂಭಿಸಲಾಗುವುದು ಮತ್ತು ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಹಣ ಒದಗಿಸಲು ಸಚಿವಾಲಯ ಪ್ರಯತ್ನಿಸಲಿದೆ ಎಂದರು. ದೇಶದಲ್ಲಿ ಸದ್ಯ 160 ಪ್ರಾಣಿ ಸಂಗ್ರಹಾಲಯಗಳಿದ್ದು, ಸರ್ಕಾರಿ ಮತ್ತು ಖಾಸಗಿ ಝೂಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಪ್ರಾಣಿ  ಸಂಗ್ರಹಾಲಯ ವಾಸ್ತವದಲ್ಲಿ ಪ್ರಾಣಿ ಸಂಗ್ರಹಾಲಯದಂತೆ ಅನುಭವ ನೀಡಬೇಕು. ಅಲ್ಲಿಗೆ ಭೇಟಿ ನೀಡುವ ಜನರಿಗೆ ಸಂತಸ ದೊರೆಯಬೇಕು. ಈ ನಿಟ್ಟಿನಲ್ಲಿ ಹೊಸ ಯೋಜನೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

SCROLL FOR NEXT