ಡೊನಾಲ್ಡ್ ಟ್ರಂಪ್ 
ದೇಶ

ತೆಲಂಗಾಣ: ಡೊನಾಲ್ಡ್ ಟ್ರಂಪ್ ಚೇತರಿಕೆಗಾಗಿ ಉಪವಾಸ ಮಾಡುತ್ತಿದ್ದ ಅಭಿಮಾನಿ ಸಾವು

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್‌ ಅಪ್ಪಟ ಅಭಿಮಾನಿಯಾಗಿದ್ದ ತೆಲಂಗಾಣದ ವ್ಯಕ್ತಿಯೊಬ್ಬ ಅವರು ಕೊರೋನಾದಿಂದ ಶೀಘ್ರವಾಗಿ ಚೇತರಿಕೆಯಾಗಲಿ ಎಂದು ಪ್ರತಿನಿತ್ಯ ಪ್ರಾರ್ಥನೆ, ವ್ರತ ಮತ್ತು ಉಪವಾಸ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ತೆಲಂಗಾಣ: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್‌ ಅಪ್ಪಟ ಅಭಿಮಾನಿಯಾಗಿದ್ದ ತೆಲಂಗಾಣದ ವ್ಯಕ್ತಿಯೊಬ್ಬ ಅವರು ಕೊರೋನಾದಿಂದ ಶೀಘ್ರವಾಗಿ ಚೇತರಿಕೆಯಾಗಲಿ ಎಂದು ಪ್ರತಿನಿತ್ಯ ಪ್ರಾರ್ಥನೆ, ವ್ರತ ಮತ್ತು ಉಪವಾಸ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ತೆಲಂಗಾಣದ ಮೆದಕ್‌ನ ನಿವಾಸಿಯಾದ ರೈತ ಬುಸ್ಸಾ ಕೃಷ್ಣರಾಜು ಮೃತ ದುರ್ದೈವಿ. ಈತ ಟ್ರಂಪ್‌ಗೆ ಕೊರೋನಾ ಸೋಂಕು ತಗುಲಿದ ನಂತರ ಆಘಾತಕ್ಕೊಳಗಾಗಿದ್ದರು. ಅವರಿಗಾಗಿ ಮೌನ ವ್ರತ, ಪೂಜೆಯೊಂದಿಗೆ ಉಪವಾಸ ಸಹ ಆರಂಭಿಸಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಡೊನಾಲ್ಡ್​ ಟ್ರಂಪ್ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದಿದ್ದರು. ಈ ಕುರಿತು ಸ್ವತಃ ಅವರೇ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದರು. ಆದರೆ, ತೆಲಂಗಾಣದ ಅಭಿಮಾನಿಯೊಬ್ಬ ಟ್ರಂಪ್​ ಚೇತರಿಕೆಗಾಗಿ ವ್ರತ ಉಪವಾಸವಿದ್ದ ಕಾರಣ ಮೃತಪಟ್ಟಿರುವ ಸುದ್ದಿ ಇದೀಗ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೇ ವ್ಯಕ್ತಿ ಈ ಹಿಂದೆಯೇ ಆರು ಅಡಿ ಎತ್ತರದ ಡೊನಾಲ್ಡ್ ಟ್ರಂಪ್ ಪ್ರತಿಮೆ ಸ್ಥಾಪಿಸಿ ನಿತ್ಯ ಪೂಜೆ ಮಾಡುವು ಮೂಲಕ ಗಮನಸೆಳೆದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!