ಕಾರಿನ ಬಾನೆಟ್ ಮೇಲೆ ಸಂಚಾರಿ ಪೊಲೀಸ್ 
ದೇಶ

ಭಯಾನಕ ವಿಡಿಯೋ! ಕಾರಿನ ಬಾನೆಟ್ ಮೇಲೆ ಸಂಚಾರಿ ಪೊಲೀಸ್, ಮುಂದೇನಾಯ್ತು ನೀವೆ ನೋಡಿ!

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೋರ್ವ ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ನನ್ನು ಎಳೆದೊಯ್ದಿರುವ ಘಟನೆ ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್ ನಲ್ಲಿ ನಡೆದಿದೆ.

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೋರ್ವ ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ನನ್ನು ಎಳೆದೊಯ್ದಿರುವ ಘಟನೆ ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್ ನಲ್ಲಿ ನಡೆದಿದೆ.

ನಿಯಮ ಉಲ್ಲಂಘಿಸಿದ ಕಾರನ್ನು ತಡೆಯಲು ಯತ್ನಿಸಿದ ಸಂಚಾರಿ ಪೊಲೀಸ್ ನನ್ನು ಕೆಲ ಮೀಟರ್ ಗಳ ವರೆಗೂ ಕಾರಿನ ಬಾನೆಟ್ ಮೇಲೆಯೇ ಎಳೆದೊಯ್ದುಲಾಗಿದೆ. ನಂತರ ಪೊಲೀಸ್ ಕಾರಿನಿಂದ ಕೆಳಗಡೆ ಬಿದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.

ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಎಎನ್ ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಇಡೀ ಘಟನೆಯ ಸುತ್ತ ವಾಹನಗಳನ್ನು ಹತ್ತಿರ ಇದ್ದರೂ ಕಾರನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

ಈ ವಿಡಿಯೋವನ್ನು ಸುಮಾರು 700 ಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಕಾರು ಚಾಲಕನ ಬಂಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಒತ್ತಾಯಿಸಲಾಗಿದೆ. ನಂತರ ಚಾಲಕನನ್ನು ಬಂಧಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ