ದೇಶ

ಕಮಲ್ ನಾಥ್ ವಿವಾದಾತ್ಮಕ ಹೇಳಿಕೆ: ಚೌಹಾಣ್, ಸಿಂಧಿಯಾ ಉಪವಾಸ ಸತ್ಯಾಗ್ರಹ, ಬಿಜೆಪಿ ನಾಯಕರ ಮೌನವ್ರತ

Shilpa D

ಭೂಪಾಲ್: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪ ಅಭ್ಯರ್ಥಿಯನ್ನು ಐಟಂ ಎಂದು ಸಂಭೋಧಿಸಿದ ಹಿನ್ನೆಲೆಯಲ್ಲಿ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಂಸದ ಜ್ಯೋತಿರಾಧಿತ್ಯ ಸೇರಿದಂತೆ ಹಲವು ಮುಖಂಡರು ಉಪವಾಸ ಧರಣಿ ಕೈಗೊಂಡಿದ್ದಾರೆ.

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮಾರ್  ಮತ್ತು ಬಿಜೆಪಿ ಇತರೆ ಮುಖಂಡರು  ಇಂದು ಸುಮಾರು 2 ತಾಸು ಮೌನ ಉಪವಾಸ ಧರಣಿ ಕೈಗೊಂಡಿದ್ದಾರೆ.

ಭೂಪಾಲ್ ಮಿಂಟೋ ಹಾಲ್ ನಲ್ಲಿ ಬೆಳಗ್ಗೆ 10 ಗಂಟೆಗೆ ಸಿಎಂ ಚೌಹಾಣ್, ಬಿಜೆಪಿಯ ರಾಜ್ಯಸಭಾ ಸದಸ್ಯ ಸಿಂಧಿಯಾ ಮತ್ತು ಲೋಕಸಭಾ ಸದಸ್ಯ ಶಂಕರ್ ಲಾಲ್ವಾನಿ ಮೌನ ಪ್ರತಿಭಟನೆ ನಡೆಸಿದರು.

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ, ಪಕ್ಷದ ಹಿರಿಯ ಮುಖಂಡ ಪ್ರಭಾತ್ ಝಾ ಮತ್ತು ಇತರ ಕೆಲವು ನಾಯಕರು ಗ್ವಾಲಿಯರ್‌ನಲ್ಲಿ ಇದೇ ರೀತಿಯ ಪ್ರತಿಭಟನೆ ನಡೆಸಿದರು.

ಜ್ಯೋತಿರಾಧಿತ್ಯ ಸಿಂಧಿಯಾ ಅವರ ನಿಷ್ಠಾವಂತೆ ಹಾಗೂ ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಮ್ ಎಂದು ಕರೆದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇಮಾರ್ತಿ ದೇವಿ ವಿರುದ್ಧದ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದರು.

SCROLL FOR NEXT